alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿಗೆ ಕಾರಣವಾಯ್ತು ಕುಡಿತದ ಚಟ ಬಿಡಿಸಲು ಕೊಟ್ಟ ಔಷಧಿ

body-d

ಬೆಳಗಾವಿ: ಅತಿಯಾಗಿ ಮದ್ಯ ಸೇವನೆ ಮಾಡುತ್ತಿದ್ದ ಯುವಕನ ಚಟ ಬಿಡಿಸಲು ಕೊಟ್ಟ ಔಷಧಿ, ಸಾವಿಗೆ ಕಾರಣವಾದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿಯಲ್ಲಿ ನಡೆದಿದೆ.

ಸ್ವಾಮೀಜಿಯೊಬ್ಬರು ಮದ್ಯಪಾನ ಬಿಡಿಸಲು ನಾಟಿ ಔಷಧಿ ಕೊಡುತ್ತಿದ್ದು, ಈ ಔಷಧ ಸೇವಿಸಿದ್ದ ಬೆಳಗಾವಿ ತಾಲ್ಲೂಕಿನ ಜುಮನಾಳದ ಸಿದ್ಧರಾಮ ನಾಯಕ(28) ಎಂಬಾತ ಮಾರ್ಚ್ 14 ರಂದು ಮೃತಪಟ್ಟಿದ್ದಾನೆ.

ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದು, ಸ್ವಾಮೀಜಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಕೊನೆಗೆ ಪೋಷಕರು ನೇಸರ್ಗಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಸ್ವಾಮೀಜಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...