alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಟ್ಟಿಗೆಯಲ್ಲಿದ್ದ ಕರುವಿನ ಮಗ್ಗುಲಲ್ಲೇ ಇತ್ತು ಮೊಸಳೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸವದಿ ದರ್ಗಾ ಗ್ರಾಮದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದೆ.

ಮುರುಗೆಪ್ಪ ಮಾಯಪ್ಪನವರ್ ಎಂಬುವವರ ಮನೆಯ ಕೊಟ್ಟಿಗೆಗೆ ನುಗ್ಗಿದ ಮೊಸಳೆ, ಅಲ್ಲಿ ಎಮ್ಮೆ ಹಾಗೂ ಕರುವನ್ನು ತಿನ್ನಲು ಮುಂದಾಗಿದೆ.

ಎಮ್ಮೆ ಒದ್ದಾಡುವುದನ್ನು ಗಮನಿಸಿದ ಮನೆಯವರು ಕೊಟ್ಟಿಗೆಗೆ ಬಂದು ನೋಡಿದಾಗ ಮೊಸಳೆ ಕಂಡು ಬಂದಿದೆ. ಕೂಡಲೇ ಗ್ರಾಮಸ್ಥರೆಲ್ಲಾ ಸೇರಿ ಮೊಸಳೆಯನ್ನು ಹಿಡಿದು ಹಗ್ಗದಿಂದ ಕಟ್ಟಿದ್ದಾರೆ.

ಮರಕ್ಕೆ ಮೊಸಳೆಯನ್ನು ಕಟ್ಟಿಹಾಕಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ ಸ್ಪಂದಿಸಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷ್ಣಾ ನದಿ ತೀರದಲ್ಲಿರುವ ಈ ಗ್ರಾಮಕ್ಕೆ ಆಗಾಗ ಮೊಸಳೆಗಳು ಬರುವುದು ಸಾಮಾನ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...