alex Certify
ಕನ್ನಡ ದುನಿಯಾ       Mobile App
       

Kannada Duniya

‘ಟಗರು ಗುದ್ದಿದ್ರೆ ಹೆಂಗಿರುತ್ತೆ ಅಂತ ಜನಾರ್ಧನ ರೆಡ್ಡಿನಾ ಕೇಳಿ’

ಬೆಳಗಾವಿ: ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಿ.ಎಂ. ಸಮಾವೇಶ ನಡೆಯುವ ಸಂದರ್ಭದಲ್ಲಿ ಕೆಲ ಕಾಲ ಮಳೆಯಾಗಿದ್ದು, ಸಮಾವೇಶಕ್ಕೆ ಬಂದಿದ್ದವರು ಕುರ್ಚಿಗಳಿಂದ ರಕ್ಷಣೆ ಪಡೆದಿದ್ದಾರೆ.

ಸಿದ್ಧರಾಮಯ್ಯ ಅವರಿಗೆ ಸಮಾವೇಶದಲ್ಲಿ ಕುರಿ ಹಾಗೂ ಕಂಬಳಿ ನೀಡಿ ಗೌರವಿಸಲಾಗಿದೆ. ಮಳೆಯಾಗುವ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಛತ್ರಿ ಹಿಡಿದುಕೊಂಡು ಸಿ.ಎಂ. ಇಬ್ರಾಹಿಂ ಅವರನ್ನು ಕರೆತಂದಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಬಿ.ಜೆ.ಪಿ. ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಎಂ. ಇಬ್ರಾಹಿಂ, ಟಗರು ಗುದ್ದಿದ್ರೆ ಹೆಂಗಿರುತ್ತೆ ಅಂತ ಜನಾರ್ಧನರೆಡ್ಡಿಯನ್ನು ಕೇಳಿ ಎಂದು ಛೇಡಿಸಿದ್ದಾರೆ.

ಬಾದಾಮಿಯಲ್ಲಿ ಶ್ರೀರಾಮುಲು ಅವರಿಗೆ ಬಾದಾಮಿ ತಿನ್ನಿಸುತ್ತೇವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ 50,000 ಮತಗಳ ಅಂತರದಿಂದ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...