alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಂಗ್ ಡ್ರೈವ್ ಹೋದವರಿಗೆ ಆಗಿದ್ದೇನು..?

ullal-beach-mangalore11

ಮಂಗಳೂರು: ಸ್ನೇಹಿತರೆಲ್ಲಾ ಒಂದಾಗಿ ಲಾಂಗ್ ಡ್ರೈವ್ ಹೋಗಿದ್ದು, ಹೀಗೆ ಹೋದವರು ಈಜಾಡಲು ಸಮುದ್ರಕ್ಕೆ ಇಳಿದಿದ್ದಾರೆ. ಅಲೆಗಳ ಹೊಡೆತಕ್ಕೆ ಸಿಲುಕಿ ನಾಲ್ವರು ಮೃತಪಟ್ಟರೆ, ಉಳಿದವರು ಈಜಿ ದಡ ಸೇರಿದ್ದಾರೆ.

ಹಾಸನದ ಇಮ್ರಾನ್, ಖಲೀಲ್, ಮಹಮ್ಮದ್ ಹಾಗೂ ಹನೀಫ್ ಅವರು ಮೃತಪಟ್ಟವರು. 3 ಬೈಕ್ ಗಳಲ್ಲಿ ಆರು ಮಂದಿ ಮಂಗಳೂರಿಗೆ ಲಾಂಗ್ ಡ್ರೈವ್ ಹೋಗಿದ್ದಾರೆ. ಉಳ್ಳಾಲ ಸಮೀಪದ ಸೋಮೇಶ್ವರ ಬೀಚ್ ನಲ್ಲಿ ಗೆಳೆಯರೆಲ್ಲಾ ಸೇರಿ ಈಜಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಅಲೆಗಳಿಗೆ ಕೊಚ್ಚಿ ಹೋಗಿ ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಪಾರಾಗಿ ಬಂದಿದ್ದು, ಮೃತಪಟ್ಟವರ ಶವ ತೆಗೆಯಲು ಪೊಲೀಸರು ಹಾಗೂ ಸ್ಥಳಿಯರು ಪ್ರಯತ್ನ ನಡೆಸಿದ್ದಾರೆ.

ಅಗ್ನಿ ಶಾಮಕ ಮತ್ತು ತುರ್ತು ಸೇವೆಯ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ಶವಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ. ಹಾಸನದಿಂದ ದರ್ಗಾವೊಂದಕ್ಕೆ ಹೋಗಲು ಬಂದಿದ್ದೆವು. ಮಾರ್ಗಮಧ್ಯೆ ಬೀಚ್ ನಲ್ಲಿ ಈಜಾಡಲು ಹೋಗಿದ್ದಾಗ ನಾಲ್ವರು ಅಲೆಗೆ ಸಿಲುಕಿದರು ಎಂದು ಮೃತರ ಸ್ನೇಹಿತರು ತಿಳಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...