alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಪತ್ ರಾಜ್ ಮೇಯರ್, ರಮಿಳಾ ಉಪಮೇಯರ್..?

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿ.ಬಿ.ಎಂ.ಪಿ.) 51 ನೇ ಮೇಯರ್ ಆಗಿ ಸಂಪತ್ ರಾಜ್ ಹಾಗೂ ಉಪಮೇಯರ್ ಆಗಿ ರಮಿಳಾ ಉಮಾಶಂಕರ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಡಿ.ಜಿ. ಹಳ್ಳಿ ವಾರ್ಡ್ ಕಾರ್ಪೊರೇಟರ್ ಆರ್. ಸಂಪತ್ ರಾಜ್, ಗೋವಿಂದರಾಜ್ ಮತ್ತು ವೇಲೂನಾಯಕ್ ಅವರ ಹೆಸರು ಮೇಯರ್ ಹುದ್ದೆಗೆ ಕೇಳಿ ಬಂದಿದ್ದವು.

ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಸಂಪತ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ಜೆ.ಡಿ.ಎಸ್. ನಿಂದ ಉಪಮೇಯರ್ ಸ್ಥಾನಕ್ಕೆ ಕಾವೇರಿಪುರ ವಾರ್ಡ್ ಕಾರ್ಪೊರೇಟರ್ ರಮಿಳಾ ಉಮಾಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ.

ಇಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಬಿ.ಜೆ.ಪಿ.ಯಿಂದಲೂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...