alex Certify
ಕನ್ನಡ ದುನಿಯಾ       Mobile App
       

Kannada Duniya

”ಮೋದಿ ಎಲ್ಲ ಭದ್ರತೆಯನ್ನೂ ತೆಗೆದು ಹಾಕಲಿ”

download-3

ಕೊಪ್ಪಳದಲ್ಲಿ ಸಚಿವ ಬಸವರಾಜ ರೆಡ್ಡಿ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಂಪು ಗೂಟದ ಕಾರನ್ನು ತೆಗೆದು ಹಾಕಿರುವ ನಿರ್ಧಾರವನ್ನು ಸ್ವಾಗತಿಸಿದ ಉನ್ನತ ಶಿಕ್ಷಣ ಸಚಿವರು, ಮೋದಿ ಎಲ್ಲ ಭದ್ರತೆಯನ್ನೂ ತೆಗೆದು ಹಾಕಲಿ ಎಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಸಾವಿಗೆ ಹೆದರಬಾರದು. ನನಗೆ ಭದ್ರತೆ ಅಗತ್ಯವಿಲ್ಲ. ತಾಕತ್ತಿದ್ದರೆ ಮೋದಿ ತಮ್ಮನ್ನೂ ಸೇರಿಸಿ ಎಲ್ಲ ಭದ್ರತೆಯನ್ನು ತೆಗೆದು ಹಾಕಲಿ ಎಂದಿದ್ದಾರೆ ಬಸವರಾಜ ರೆಡ್ಡಿ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ವಿವಿಐಪಿ ಸಂಸ್ಕೃತಿ ತೆಗೆದು ಹಾಕುವ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಮತ್ಯಾರೂ ಕೆಂಪು ಅಥವಾ ನೀಲಿ ಗೂಟದ ಕಾರನ್ನು ಬಳಸುವಂತಿಲ್ಲ. ಇದು ದೇಶದಾದ್ಯಂತ ಚರ್ಚೆಯಾಗ್ತಾ ಇದೆ.

ಉತ್ತರ ಪ್ರದೇಶದಲ್ಲಿ ಇಂದಿನಿಂದಲೇ ವಿವಿಐಪಿ ಸಂಸ್ಕೃತಿಯನ್ನು ತೆಗೆದು ಹಾಕಲಾಗಿದೆ. ತಮಿಳುನಾಡು ಸಿಎಂ ಕೂಡ ಕೆಂಪು ಗೂಟವನ್ನು ತೆಗೆದು ಹಾಕಿದ್ದಾರೆ. ಪರಮೇಶ್ವರ್ ನಿನ್ನೆ ಕೆಂಪು ಗೂಟವನ್ನು ಕಿತ್ತೆಸೆದಿದ್ದಾರೆ. ಈ ಬಗ್ಗೆ ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ರೆಡ್ಡಿ, ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಿದ್ರು. ಇದ್ರ ಜೊತೆಗೆ ಪಿಎಂ ವಿವಿಐಪಿಗಳಿಗೆ ನೀಡಿರುವ ಎಲ್ಲ ಭದ್ರತೆಯನ್ನೂ ತೆಗೆದು ಹಾಕಬೇಕೆಂದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...