alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಟಿಗೆಂದು ಬಂದ ಗ್ರಾಹಕರ ಮೇಲೆಯೇ ಹಲ್ಲೆ ನಡೆಸಿದ ಬೌನ್ಸರ್

ಬೆಂಗಳೂರು : ಪಾರ್ಟಿಗೆಂದು ಬಂದ ಗ್ರಾಹಕರ ಮೇಲೆಯೇ ಬಾರ್ ಆಂಡ್ ರೆಸ್ಟೋರೆಂಟ್ ನ ಬೌನ್ಸರ್ ನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಚಿಂಗ್ ಲುಂಗ್ ಬಾರ್ ಅಂಡ್ ರೆಸ್ಟೋರೆಂಟ್‍ ನಲ್ಲಿ ನಡೆದಿದೆ.

ಕಾನೂನು ವಿದ್ಯಾರ್ಥಿಗಳಾದ ರಿತ್ವಿಕ್ ಪಾರಿಸಷೋತ್ ಹಾಗೂ ಅಮರಜೀತ್ ಎಂಬುವವರು ಪಾರ್ಟಿ ಮಾಡಲೆಂದು ನ್ಯೂ ಬಿಇಎಲ್ ರಸ್ತೆಯಲ್ಲಿರುವ ಚಿಂಗ್ ಲುಂಗ್ ಬಾರ್ ಅಂಡ್ ರೆಸ್ಟೋರೆಂಟ್‍ ಗೆ ತೆರಳಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಆರಂಭವಾಗಿ, ರೆಸ್ಟೋರೆಂಟ್ ನ ಬೌನ್ಸರ್ ರಕ್ಷಿತ್ ಎಂಬಾತ ಅಲ್ಲಿಯೇ ಇದ್ದ ಬಿಯರ್ ಬಾಟಲ್ ತೆಗೆದುಕೊಂಡು ಯುವಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ಬೌನ್ಸರ್ ನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ರಿತ್ವಿಕ್ ಹಾಗೂ ಅಮರಜೀತ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ರಕ್ಷಿತ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...