alex Certify
ಕನ್ನಡ ದುನಿಯಾ       Mobile App
       

Kannada Duniya

ವಿರೂಪಾಕ್ಷ ದೇವಾಲಯದ ಹುಂಡಿಯಲ್ಲಿ ಬ್ಯಾನ್ ಆದ ನೋಟು ಪತ್ತೆ

ವಿಜಯನಗರ: ದೇಶದಲ್ಲಿ ನೋಟ್ ಬ್ಯಾನ್ ಆಗಿ ಎರಡು ವರ್ಷಗಳಾಗುತ್ತಾ ಬಂದರೂ ಹಲವೆಡೆಗಳಲ್ಲಿ ಆಗಾಗ ಹಳೆ ನೋಟುಗಳು ಪತ್ತೆಯಾಗಿ ಸುದ್ದಿ ಮಾಡುತ್ತಲೇ ಇದೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಹುಂಡಿಯಲ್ಲಿ 500 ಹಾಗೂ 1000 ರೂ. ಮುಖಬೆಲೆಯ ಹಳೆಯ ನೋಟುಗಳು ದೊರೆತಿವೆ.

ದೇವಾಲಯದ ಹುಂಡಿ ಎಣಿಕೆ ಸಂದರ್ಭದಲ್ಲಿ ಈ ನೋಟುಗಳು ಸಿಕ್ಕಿದ್ದು, 500 ಮುಖಬೆಲೆಯ ಹತ್ತು ನೋಟುಗಳು ಹಾಗೂ 1000 ಮುಖಬೆಲೆಯ ಎರಡು ನೋಟುಗಳು ಪತ್ತೆಯಾಗಿವೆ. ಒಟ್ಟು ಏಳು ಸಾವಿರ ಹಳೆಯ ನೋಟುಗಳು ಹುಂಡಿಯಲ್ಲಿ ದೊರೆತಿವೆ. ಭಕ್ತರು ತಮ್ಮ ಬಳಿ ಇರುವ ಬ್ಯಾನ್ ಆದ ನೋಟುಗಳನ್ನು ದೇವರ ಹುಂಡಿಗಳಿಗೆ ಹಾಕುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಇನ್ನು ಹುಂಡಿಯಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಬಿಡುಗಡೆ ಮಾಡಿದ್ದ 10 ರೂಪಾಯಿ ಒಂದು ಕಾಯಿನ್ ದೊರೆತಿದೆ. ವಿದೇಶಿ ಡಾಲರ್ ನ ನಾಲ್ಕು ನೋಟುಗಳು ಕೂಡ ಹುಂಡಿಯಲ್ಲಿ ದೊರೆತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...