alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕಿನಲ್ಲೇ ಆತ್ಮಹತ್ಯೆಗೆ ಮುಂದಾದ ರೈತ

gadag

ಗದಗ: ಒತ್ತೆ ಇಟ್ಟಿದ್ದ ಚಿನ್ನವನ್ನು ಮಾಹಿತಿ ನೀಡದೇ, ಬ್ಯಾಂಕ್ ಅಧಿಕಾರಿಗಳು ಹರಾಜು ಹಾಕಿದ್ದರಿಂದ, ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಗದಗ ಜಿಲ್ಲೆಯ ಹೊಳೆ ಆಲೂರು ಬ್ಯಾಂಕ್ ಒಂದರಲ್ಲಿ, ಬಿ.ಎಸ್. ಬೇಲೇರಿ ಗ್ರಾಮದ ರೈತ ಮಲ್ಲಪ್ಪ ಚಿನ್ನವನ್ನು ಒತ್ತೆ ಇಟ್ಟು ಸಾಲ ಪಡೆದುಕೊಂಡಿದ್ದಾರೆ. ಬರಗಾಲದ ಕಾರಣಕ್ಕೆ ಬೆಳೆ ನಷ್ಟವಾಗಿ ಅವರಿಗೆ ಸಕಾಲಕ್ಕೆ ಸಾಲ ಪಾವತಿಸಲು ಸಾಧ್ಯವಾಗಿರಲಿಲ್ಲ.

ಬ್ಯಾಂಕಿನ ಅಧಿಕಾರಿಗಳು ಮಲ್ಲಪ್ಪರಿಗೆ ಮಾಹಿತಿ ನೀಡದೇ ಚಿನ್ನವನ್ನು ಹರಾಜು ಮಾಡಿದ್ದಾರೆ ಎನ್ನಲಾಗಿದೆ.

ಇದರಿಂದ ಮನನೊಂದ ಮಲ್ಲಪ್ಪ, ಬ್ಯಾಂಕ್ ಮ್ಯಾನೇಜರ್ ಎದುರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ಯಾಂಕಿನಲ್ಲಿದ್ದ ಗ್ರಾಹಕರು ಅವರಿಂದ ವಿಷದ ಬಾಟಲಿ ಕಸಿದುಕೊಂಡು, ಸಮಾಧಾನಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...