alex Certify
ಕನ್ನಡ ದುನಿಯಾ       Mobile App
       

Kannada Duniya

ಶವ ಸಾಗಿಸಲು ಮುಂದಾದ ಅಪ್ಪ-ಮಗ ಅರೆಸ್ಟ್

ಬೆಂಗಳೂರು: ಪತ್ನಿ ಮೇಲೆ ಅನುಮಾನಗೊಂಡ ಪತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

38 ವರ್ಷದ ಪ್ರೀತಿ ಕೊಲೆಯಾದ ದುರ್ದೈವಿ. ಉತ್ತರ ಪ್ರದೇಶ ಮೂಲದ ಹಿರೇನ್ ಎಂಬಾತ ಕೃತ್ಯ ಎಸಗಿದ್ದು, ಕೆಲ ವರ್ಷಗಳಿಂದ ರಾಜಾಜಿನಗರದಲ್ಲಿ ದಂಪತಿ ವಾಸವಿದ್ದರು. ಇವರಿಗೆ 18 ವರ್ಷದ ಓರ್ವ ಮಗನೂ ಇದ್ದಾನೆ.

20 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿ ಮಧ್ಯೆ ಆಗಾಗ ಜಗಳ ಆರಂಭವಾಗುತ್ತಿತ್ತು. ಪತ್ನಿಗೆ ಅನೈತಿಕ ಸಂಬಂಧ ಇರೋದಾಗಿ ಅನುಮಾನಿಸುತ್ತಿದ್ದ ಪತಿ, ಪದೇ ಇದೇ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದ. ತಡರಾತ್ರಿಯೂ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಹಿರೇನ್ ಚಾಕುವಿನಿಂದ ಪತ್ನಿ ಕತ್ತಿನ ಭಾಗಕ್ಕೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಕಾಲೇಜಿನಿಂದ ಬಂದ ಮಗನಿಗೆ ವಿಷಯ ತಿಳಿದ ಬಳಿಕ ಅಪ್ಪನ ಜತೆ ಸೇರಿ ತಾಯಿಯ ಶವವನ್ನು ಮೂಟೆ ಕಟ್ಟಿ ಹೊರ ಸಾಗಿಸಲು ಮುಂದಾಗಿದ್ದಾರೆ. ಈ ವೇಳೆ ನೆರೆಹೊರೆಯವರು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ರಾಜಾಜಿನಗರ ಪೊಲೀಸರು, ಅಪ್ಪ-ಮಗ ಇಬ್ಬರನ್ನೂ ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...