alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ನ್ಯೂಸ್: ಬೆಂಗಳೂರಿನ ಹಲವೆಡೆ ನಡುಗಿದ ಭೂಮಿ

ಬೆಂಗಳೂರಿನ ರಾಜರಾಜೇಶ್ವರಿ ನಗರ, ಕುಮಾರ ಸ್ವಾಮಿ ಲೇ ಔಟ್ ಹಾಗೂ ಜೆ.ಪಿ. ನಗರ ಸೇರಿದಂತೆ ಹಲವೆಡೆ ಇಂದು ಭೂಮಿ ಕಂಪಿಸಿದ ಅನುಭವವಾಗಿದ್ದು, ಜನತೆ ಆತಂಕಕ್ಕೊಳಗಾದ ಘಟನೆ ನಡೆದಿದೆ.

ಇಂದು ಮಧ್ಯಾಹ್ನ 2- ರಿಂದ 3 ಗಂಟೆ ಸಮಯದಲ್ಲಿ ಕೆಲವು ಸೆಕೆಂಡುಗಳ ಕಾಲ ಈ ಅನುಭವವಾಗಿದ್ದು, ಬಹಳಷ್ಟು ಮಂದಿ ಮಳೆ ವಾತಾವರಣವಿದ್ದ ಕಾರಣ ಈ ರೀತಿಯಾಗಿರಬಹುದೆಂದು ಭಾವಿಸಿದ್ದರಾದರೂ ಬಳಿಕ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಬಳಿಕ ತಮಗೂ ಇದೇ ರೀತಿ ಆಯಿತೆಂದು ಹೇಳಿದ್ದಾರೆ.

ಜೊತೆಗೆ ಭಾರೀ ಸದ್ದು ಕೇಳಿ ಬಂದಿದೆ ಎಂದು ಹಲವರು ಹೇಳಿಕೊಂಡಿದ್ದು, ಆದರೆ ಇದು ಯಾವ ಕಾರಣಕ್ಕೆ ಸಂಭವಿಸಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಭೂಮಿ ನಡುಗಿದ ಅನುಭವವಾದ ವೇಳೆ ಕೆಲ ಸಾರ್ವಜನಿಕರು ಗಾಬರಿಯಿಂದ ತಮ್ಮ ಮನೆಯಿಂದ ಹೊರಗೋಡಿ ಬಂದಿರುವ ಘಟನೆಯೂ ನಡೆದಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...