alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕ-ಯುವತಿಯರ ಡಿಜೆ ಪಾರ್ಟಿಯಿಂದ ಸಾರ್ವಜನಿಕರಿಗೆ ಕಿರಿಕಿರಿ…!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವೀಕೆಂಡ್ ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವಕ- ಯುವತಿಯರು ಐಷಾರಾಮಿ ಬಂಗಲೆಯೊಂದರಲ್ಲಿ ಕಿವಿಗಡಚಿಕ್ಕುವಂತೆ ಮ್ಯೂಸಿಕ್ ಹಾಕಿಕೊಂಡು ಅಕ್ಕ ಪಕ್ಕದ ನಿವಾಸಿಗಳಿಗೆ ಕಿರಿಕಿರಿಯನ್ನುಂಟು ಮಾಡಿದ ಘಟನೆ ನಡೆದಿದೆ.

ಕ್ರೆಸೆಂಟ್ ರಸ್ತೆಯ ಬಂಗಲೆಯೊಂದರಲ್ಲಿ ಡಿಜೆ ಪಾರ್ಟಿಯನ್ನು ಏರ್ಪಡಿಸಲಾಗಿದ್ದು, ಸಂಜೆ 5 ಗಂಟೆಯಿಂದ ರಾತ್ರಿ 12-30 ರ ವರೆಗೆ ಅಬ್ಬರದ ಮ್ಯೂಸಿಕ್ ಜೊತೆಗೆ ಕುಡಿತ, ಕುಣಿತದ ಈ ಮೋಜು-ಮಸ್ತಿ ನಡೆದಿದೆ.

ಸ್ಥಳೀಯ ನಿವಾಸಿಗಳು ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಸೂಚನೆ ನೀಡಿದರೂ ಅದನ್ನು ಲೆಕ್ಕಿಸದೆ ಈ ಯುವಕ-ಯುವತಿಯರು ತಮ್ಮದೇ ಲೋಕದಲ್ಲಿದ್ದರೆಂದು ಹೇಳಲಾಗಿದೆ. ಕೆಲವರಂತೂ ಕೈಯಲ್ಲಿ ಸಿಗರೇಟ್ ಹಾಗೂ ಮದ್ಯ ತುಂಬಿದ ಗ್ಲಾಸ್ ಹಿಡಿದುಕೊಂಡು ರಸ್ತೆಗೆ ಬಂದಿದ್ದು, ಡಿಜೆ ಪಾರ್ಟಿ ಮಾಡಲು ಇವರುಗಳು ಅನುಮತಿ ಪಡೆದಿದ್ದಾರಾ ಎಂಬ ಪ್ರಶ್ನೆಗಳು ಈಗ ಮೂಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...