alex Certify
ಕನ್ನಡ ದುನಿಯಾ       Mobile App
       

Kannada Duniya

ಎಂದಿನಂತೆ ಜನಜೀವನ, ವಾಹನ ಸಂಚಾರ

ben-meje

ಬೆಂಗಳೂರು: ನೋಟ್ ಬ್ಯಾನ್ ವಿರೋಧಿಸಿ, ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು, ಆಕ್ರೋಶ್ ದಿವಸ್ ಆಚರಣೆಗೆ ಕರೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಬಿ.ಜೆ.ಪಿ. ಸಂಭ್ರಮ್ ದಿವಸ್ ಆಚರಣೆಗೆ ಮುಂದಾಗಿದೆ.

ಭಾರತ್ ಬಂದ್ ಇಲ್ಲ ಎಂದು ಕಾಂಗ್ರೆಸ್ ಈಗಾಗಲೇ ಸ್ಪಷ್ಟಪಡಿಸಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನಜೀವನ ಯಥಾಸ್ಥಿತಿಯಲ್ಲಿದೆ. ಮೆಟ್ರೋ ರೈಲು ಸಂಚಾರ ಎಂದಿನಂತೆಯೇ ಇದೆ. ಸರ್ಕಾರಿ, ಖಾಸಗಿ ಬಸ್, ಆಟೋ ಮೊದಲಾದ ವಾಹನಗಳ ಸಂಚಾರವಿದ್ದು, ಅಂಗಡಿ ಮುಂಗಟ್ಟು ಹೋಟೆಲ್ ಗಳಲ್ಲಿ ಎಂದಿನಂತೆಯೇ ವ್ಯಾಪಾರ ವಹಿವಾಟು ನಡೆದಿದೆ.

ಮೈಸೂರು, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ಹುಬ್ಬಳ್ಳಿ ಕಲಬುರಗಿ, ಉಡುಪಿ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಎಂದಿನಂತೆಯೇ ವಾಹನ ಮತ್ತಿತರ ಸೇವೆಗಳಿದ್ದು, ಜನಜೀವನ ಯಥಾಸ್ಥಿತಿಯಲ್ಲಿದೆ. ಶಾಲಾ, ಕಾಲೇಜು, ಕಚೇರಿ, ಬ್ಯಾಂಕ್ ಗಳು ಎಂದಿನಂತೆಯೇ ನಡೆಯಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...