alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಬಿ.ಜೆ.ಪಿ. ಸಮಾವೇಶದಲ್ಲಿ ನಡೆದಿದೆ ಇಂತಹ ಘಟನೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿ.ಜೆ.ಪಿ. ಪರಿವರ್ತನಾ ಯಾತ್ರೆ ಸಮಾವೇಶ ನಡೆಸಲಾಗ್ತಿದೆ. ಗುಡಿಬಂಡೆ, ಗೌರಿಬಿದನೂರು ಮೊದಲಾದ ಕಡೆಗಳಲ್ಲಿ ಸಮಾವೇಶ ನಡೆಸಿದ ಬಳಿಕ ಬಾಗೇಪಲ್ಲಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ.

ಬಾಗೇಪಲ್ಲಿಯ ಗೂಳೂರು ಸರ್ಕಲ್ ಬಳಿ ಆಯೋಜಿಸಿದ್ದ ಸಮಾವೇಶದಲ್ಲಿ ಜನರನ್ನು ಸೆಳೆಯಲು ಆರ್ಕೆಸ್ಟ್ರಾ ಕರೆಸಲಾಗಿದೆ. ಆರ್ಕೆಸ್ಟ್ರಾ ಕಲಾವಿದರೊಂದಿಗೆ ಕೆಲವರು ವೇದಿಕೆಯಲ್ಲಿ ಕಾಣಿಸಿಕೊಂಡು ಡ್ಯಾನ್ಸ್ ಮಾಡಿದ್ದಾರೆ.

ಸಮಾವೇಶ ಆರಂಭವಾಗುವ ಮೊದಲು ಹಾಡು, ಡ್ಯಾನ್ಸ್ ಮೂಲಕ ರಂಜಿಸಲಾಗಿದೆ. ಮದ್ಯದ ಬಾಟಲಿ ಹಿಡಿದವರೊಬ್ಬರು ‘ಸಾರಾಯಿ ಸೀಸೆಯಲಿ..’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ವೃದ್ಧರೊಬ್ಬರು ಆರ್ಕೆಸ್ಟ್ರಾ ಯುವತಿಯೊಂದಿಗೆ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದ್ದು, ಇದು ಮುಖಂಡರ ಗಮನಕ್ಕೆ ಬರುತ್ತಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿಯೊಬ್ಬರು ಜನರನ್ನು ಸೇರಿಸಲು ಹೀಗೆ ಮಾಡಿದ್ದು, ಅದಕ್ಕೆ ಪಕ್ಷದ ಮುಖಂಡರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...