alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರವಾಗಿದೆ ಚಿಕ್ಕಪ್ಪ –ಯುವತಿಯ ಲವ್ ಸ್ಟೋರಿ

ಬಾಗಲಕೋಟೆ: ಬಾಗಲಕೋಟೆಯಲ್ಲೊಂದು ವಿಚಿತ್ರ ಲವ್ ಸ್ಟೋರಿ ನಡೆದಿದೆ. ಇಲ್ಲಿನ ನವನಗರ ಠಾಣೆ ನಿವಾಸಿಯಾಗಿರುವ ಯುವಕ ಹಾಗೂ ಯುವತಿ 1 ವರ್ಷದಿಂದ ಪ್ರೀತಿಸಿದ್ದಾರೆ.

ಸಂಬಂಧದಲ್ಲಿ ಈತ ಚಿಕ್ಕಪ್ಪನಾಗಿದ್ದು, ಆಕೆ ಮಗಳಾಗುತ್ತಾಳೆ. ಇವರಿಬ್ಬರ ನಡುವೆ ಪ್ರೀತಿಯಾಗಿ, ಕಳೆದ ವಾರ ಮನೆ ಬಿಟ್ಟು ಹೋಗಿದ್ದಾರೆ. ಅವರಿಗೆ ಮದುವೆ ಮಾಡುವುದಾಗಿ ಪೋಷಕರು ಕರೆಸಿಕೊಂಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪಂಚಾಯಿತಿ ನಡೆಸಿದ್ದು, ಯುವತಿಯನ್ನು ಪೋಷಕರು ಕರೆದುಕೊಂಡು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾನೆ.

ಸಂಬಂಧದ ಬಗ್ಗೆ ನಮಗೆ ಗೊತ್ತಿಲ್ಲ. ನಾವಿಬ್ಬರೂ ಪ್ರೀತಿಸಿದ್ದು, ಮದುವೆಯಾಗಲು ನಿಶ್ಚಯಿಸಿದ್ದೇವೆ ಎಂದು ಹೇಳಿದ್ದಾನೆ. ಬಾಗಲಕೋಟೆ ನವನಗರ ಠಾಣೆ ಪೊಲೀಸರು ಯುವತಿಯನ್ನು ಪೋಷಕರೊಂದಿಗೆ ಕಳಿಸಿದ್ದು, ನನ್ನೊಂದಿಗೆ ಯುವತಿಯನ್ನು ಕಳಿಸಿಕೊಡಬೇಕೆಂದು ಒತ್ತಾಯಿಸಿದ್ದಾನೆ. ಆಕೆ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ.

ಆದರೆ, ಯುವತಿಯ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಬಂಧಿಯಾಗಿರುವ ಚಿಕ್ಕಪ್ಪ –ಮಗಳ ನಡುವೆ ಮದುವೆಯಾದರೆ, ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಷಯ ಯುವತಿಯ ಪೋಷಕರಿಗೆ ಮೊದಲೇ ಗೊತ್ತಿತ್ತು. ಆದರೆ, ಅವರು ಪ್ರೀತಿಸುವವರೆಗೂ ಸುಮ್ಮನಿದ್ದು, ಈಗ ವಿರೋಧ ಮಾಡುತ್ತಿದ್ದಾರೆ ಎಂದು ಯುವಕನ ಸಹೋದರಿ ಹೇಳಿದ್ದಾರೆ. ಈ ವಿಚಿತ್ರ ಲವ್ ಸ್ಟೋರಿ ಕುರಿತಾಗಿ ಬಾಗಲಕೋಟೆಯಲ್ಲಿ ಭಾರೀ ಚರ್ಚೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...