alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದಲ್ಲಿತ್ತು ನವಜಾತ ಶಿಶು

ಬಾಗಲಕೋಟೆ: ನವಜಾತ ಹೆಣ್ಣುಶಿಶುವನ್ನು ದೇವಾಲಯದಲ್ಲಿ ಬಿಟ್ಟುಹೋದ ಘಟನೆ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಎಸ್.ಕೆ. ಕಲ್ಲಾಪುರದಲ್ಲಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿ ಶಿವರಾಯಪ್ಪಜ್ಜನ ದೇವಾಲಯವಿದೆ. ದೇವಾಲಯದ ಕಟ್ಟೆಯ ಮೇಲೆ ಮಗುವನ್ನು ಬಟ್ಟೆಯಲ್ಲಿ ಸುತ್ತಿಟ್ಟು ಪೋಷಕರು ಪರಾರಿಯಾಗಿದ್ದಾರೆ.

ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಸದಾಶಿವಪ್ಪ ಎಂಬುವವರಿಗೆ ಮಗು ಅಳುವ ಶಬ್ಧ ಕೇಳಿ ಹುಡುಕಾಡಿದಾಗ, ದೇವಾಲಯದ ಕಟ್ಟೆಯ ಮೇಲೆ ಮಗು ಇರುವುದು ಕಂಡು ಬಂದಿದೆ.

ಅವರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಗ್ರಾಮಸ್ಥರು ಮಗುವನ್ನು ಆರೈಕೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಮಗು 2.5 ಕೆ.ಜಿ. ತೂಕವಿದ್ದು, ಆರೋಗ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...