alex Certify
ಕನ್ನಡ ದುನಿಯಾ       Mobile App
       

Kannada Duniya

ಹಳ್ಳದಲ್ಲಿ ಬಿದ್ದಿದ್ದ ನೋಟಿಗೆ ಮುಗಿ ಬಿದ್ದ ಜನ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗೋರಬಾಳ ಹಿರೇಹಳ್ಳದಲ್ಲಿ 2000 ರೂ. ಮುಖಬೆಲೆಯ ಸುಮಾರು 500 ನೋಟುಗಳು ಕಂಡು ಬಂದಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋರಬಾಳ ನಾಕಾ ಸಮೀಪದ ಹಿರೇಹಳ್ಳದಲ್ಲಿ 2000 ನೋಟುಗಳು ಕಂಡು ಬಂದಿರುವ ಸುದ್ದಿ ತಿಳಿದ ಜನ ಅವುಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಅವು ನಕಲಿ ನೋಟುಗಳು ಎಂಬುದು ಗೊತ್ತಾಗುತ್ತಲೇ ಅಲ್ಲಿಯೇ ಬಿಸಾಡಿದ್ದಾರೆ.

ಹಳ್ಳದಲ್ಲಿರುವುದು ನಕಲಿ ನೋಟು ಎಂಬುದು ಗೊತ್ತಾಗಿ ಕೆಲವರು ಬೆಂಕಿ ಹಚ್ಚಲು ಮುಂದಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಇಳಕಲ್ ಪೊಲೀಸರು, ನಕಲಿ ನೋಟುಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...