alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಯ ಜವಾನ ಸೇರಿ ನಾಲ್ವರಿಂದ ನೀಚ ಕೃತ್ಯ

bagalkote

ಬಾಗಲಕೋಟೆ: ಸ್ಕಾಲರ್ ಶಿಪ್ ಕೊಡಿಸುವುದಾಗಿ ಕರೆದೊಯ್ದು, ಶಾಲಾ ಬಾಲಕಿ ಮೇಲೆ ಜವಾನ ಸೇರಿ ನಾಲ್ವರು ಅತ್ಯಾಚಾರ ಎಸಗಿದ್ದಾರೆ.

ನೊಂದ ಬಾಲಕಿ ನ್ಯಾಯಕ್ಕಾಗಿ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾಳೆ. ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾಳೆ.

ಪರಿಶಿಷ್ಟ ಜಾತಿ, ಪಂಗಡದವರಿಗೆ ಸ್ಕಾಲರ್ ಶಿಪ್ ಬಂದಿದ್ದು, ಬಾಗಲಕೋಟೆಗೆ ಹೋಗಬೇಕಿದೆ ಎಂದು ಜವಾನ, ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ.

ಕಾರಿನಲ್ಲಿ ಇನ್ನು ಮೂವರು ಇದ್ದು, ಅವರು ಕೊಟ್ಟ ತಂಪು ಪಾನೀಯ ಕುಡಿದ ಬಳಿಕ ಬಾಲಕಿಗೆ ಪ್ರಜ್ಞೆ ತಪ್ಪಿದೆ. ಕಾರಿನಲ್ಲಿಯೇ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ಪ್ರಜ್ಞೆ ಬಂದ ಬಳಿಕ ಬಾಲಕಿ ಮನೆ ಸೇರಿದ್ದು, ಆಕೆಗೆ ಹುಷಾರಿಲ್ಲದ ಕಾರಣ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ವೈದ್ಯರು ಅತ್ಯಾಚಾರ ನಡೆದಿರುವ ವಿಷಯ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಲು ಪೋಷಕರು ಹಿಂದೇಟು ಹಾಕಿದ್ದಾರೆ.

ಬಾಲಕಿ ಜವಾನ ಮತ್ತು ಆತನ ಸ್ನೇಹಿತರು ಎಸಗಿದ ನೀಚ ಕೃತ್ಯದ ಬಗ್ಗೆ ಪ್ರಧಾನಿ ಕಾರ್ಯಾಲಯ, ಮಹಿಳಾ ಆಯೋಗ, ಜಿಲ್ಲಾ ಪಂಚಾಯಿತಿ ಸಿ.ಇ.ಒ. ಅವರಿಗೆ ಪತ್ರ ಬರೆದು ತಿಳಿಸಿದ್ದಾಳೆ. ಸಿ.ಇ.ಒ. ಅವರು ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...