alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕಪ್ಪಿದ್ದಾಳೆಂದು ಇಂಥ ಕೆಲಸ ಮಾಡಿದ್ದಾನೆ ನೋಡಿ

poli-bagal-kappu

ಬಾಗಲಕೋಟೆ: ಪತ್ನಿ ಕಪ್ಪಾಗಿದ್ದಾಳೆ ಎಂದು ಪತಿಯೇ ಮನೆಯವರೊಂದಿಗೆ ಸೇರಿ ಕೊಲೆ ಮಾಡಿದ ರಾಕ್ಷಸೀಯ ಕೃತ್ಯ   ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದಲ್ಲಿ ನಡೆದಿದೆ.

23 ವರ್ಷದ ಮಹಿಳೆ 3 ದಿನಗಳ ಹಿಂದೆ ಮೃತಪಟ್ಟಿದ್ದು, ಆಕೆ ತೀವ್ರ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾಗಿ ಗಂಡನ ಮನೆಯವರು ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಆದರೆ, ಆರೋಗ್ಯವಾಗಿಯೇ ಇದ್ದ ಮಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದರ ಬಗ್ಗೆ ಮಹಿಳೆಯ ತವರು ಮನೆಯವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಆಕೆ ಕಪ್ಪಾಗಿದ್ದಾಳೆ ಎಂದು ಗಂಡ, ಮೈದುನ, ಅತ್ತೆ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಇಳಕಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಪತಿ ಕುಟುಂಬದವರು ಪರಾರಿಯಾಗಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದು, ಮಹಿಳೆಯ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...