alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಗುಡಿಯಲ್ಲಿ ಮೊಸಳೆ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

bagal-mosale

ಬಾಗಲಕೋಟೆ: ದೇವಾಲಯಕ್ಕೆ ಪೂಜೆಗೆ ಬಂದ ಗ್ರಾಮಸ್ಥರು ಬೆಚ್ಚಿ ಬಿದ್ದ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ನಡೆದಿದೆ.

ಕೃಷ್ಣಾ ನದಿಯಲ್ಲಿ ನೀರಿಲ್ಲದೇ ಮೊಸಳೆಗಳು ಆಹಾರ ಅರಸುತ್ತಾ ಊರಿನ ಕಡೆ ಮುಖಮಾಡಿವೆ. 10 ದಿನಗಳ ಹಿಂದೆಯಷ್ಟೇ ಕೆಸರಿನಲ್ಲಿ ಸಿಲುಕಿದ್ದ ಮೊಸಳೆಯನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದರು.

ರಾತ್ರಿ ಬರೋಬ್ಬರಿ 12 ಅಡಿ ಉದ್ದದ ಬೃಹತ್ ಮೊಸಳೆಯೊಂದು ಕೃಷ್ಣಾ ನದಿಯಿಂದ ಬಂದು ಗ್ರಾಮದ ಆಂಜನೇಯ ದೇವಾಲಯದ ಗರ್ಭಗುಡಿಯಲ್ಲಿ ಮಲಗಿದೆ.

ಪೂಜೆಗೆ ಬಂದಿದ್ದ ಅರ್ಚಕರು, ಗ್ರಾಮಸ್ಥರು ಗರ್ಭಗುಡಿಯಲ್ಲಿ ಮೊಸಳೆ ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಗ್ರಾಮದ ಯುವಕರು ಆಗಮಿಸಿ ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಕೃಷ್ಣಾ ನದಿಯಲ್ಲಿ ನೀರಿಲ್ಲದ ಕಾರಣ ಮೊಸಳೆಗಳು ಗ್ರಾಮಗಳಿಗೆ, ಹೊಲಗಳಿಗೆ ನುಗ್ಗುತ್ತಿವೆ. ಅನೇಕ ಮೊಸಳೆಗಳು ಸಾವು ಕಂಡಿದ್ದು, ಹಲವು ಮೊಸಳೆಗಳನ್ನು ರಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...