alex Certify
ಕನ್ನಡ ದುನಿಯಾ       Mobile App
       

Kannada Duniya

ಕಂದಮ್ಮನ ಜೀವಕ್ಕೆ ಎರವಾಯ್ತು ಈರುಳ್ಳಿ

onionn

ಬಳ್ಳಾರಿ: ಮಕ್ಕಳು ಆಟವಾಡುವ ಸಂದರ್ಭದಲ್ಲಿ ಗಮನ ಹರಿಸಬೇಕು. ಇಲ್ಲದಿದ್ದರೆ, ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ.

ಆಟವಾಡುತ್ತಿದ್ದ ಮಗು ಈರುಳ್ಳಿ ನುಂಗಿ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಖಾನಾ ಹೊಸಹಳ್ಳಿಯಲ್ಲಿ ನಡೆದಿದೆ. 2 ವರ್ಷದ ಹೆಣ್ಣು ಮಗು ಆಟವಾಡುವ ಸಂದರ್ಭದಲ್ಲಿ ಈರುಳ್ಳಿ ನುಂಗಿದ್ದು, ಅದು ಗಂಟಲಲ್ಲಿ ಸಿಲುಕಿ ಮೃತಪಟ್ಟಿದೆ ಎಂದು ಹೇಳಲಾಗಿದೆ. ಮನೆಯ ಒಳಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಮಗುವಿನ ಕೈಗೆ ಈರುಳ್ಳಿ ಸಿಕ್ಕಿದ್ದು, ಅದರಲ್ಲಿಯೇ ಆಟವಾಡತೊಡಗಿದೆ.

ಬಳಿಕ ಆಟವಾಡುತ್ತಾ ಅದನ್ನು ನುಂಗಿ ಅಸ್ವಸ್ಥಗೊಂಡಿದೆ. ಮನೆಯವರು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಈ ವೇಳೆಗೆ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...