alex Certify
ಕನ್ನಡ ದುನಿಯಾ       Mobile App
       

Kannada Duniya

ಬಳ್ಳಾರಿಯಲ್ಲಿ ‘ಬಾಹುಬಲಿ’ ನೋಡಿದ ರಾಜಮೌಳಿ

bellary-raj

ಬಳ್ಳಾರಿ: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ -2’ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಗಳಿಕೆಯಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ‘ಬಾಹುಬಲಿ -2’ ಹೊಸ ದಾಖಲೆ ಬರೆದಿದೆ. ಚಿತ್ರದ ನಿರ್ದೇಶಕ ರಾಜಮೌಳಿ ಬಳ್ಳಾರಿಗೆ ಆಗಮಿಸಿ, ಸಿನಿಮಾ ವೀಕ್ಷಿಸಿದ್ದಾರೆ.

ಬಳ್ಳಾರಿಯ ರಾಧಿಕಾ ಚಿತ್ರಮಂದಿರಲ್ಲಿ ‘ಬಾಹುಬಲಿ -2’ ಪ್ರದರ್ಶನ ಕಾಣುತ್ತಿದ್ದು, ಕುಟುಂಬ ಸಮೇತರಾಗಿ ಚಿತ್ರ ಮಂದಿರಕ್ಕೆ ಭೇಟಿ ನೀಡಿದ್ದ ರಾಜಮೌಳಿ ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬಾಹುಬಲಿ’ ಮೊದಲ ಮತ್ತು 2 ನೇ ಭಾಗ ಯಶಸ್ವಿಯಾಗಿವೆ. ಅದರಲ್ಲಿನ ಪಾತ್ರಗಳು ಪ್ರೇರಣೆ ನೀಡಿವೆ ಎಂದು ಹೇಳಿದ್ದಾರೆ.

ಸದ್ಯ ಯಾವುದೇ ಪ್ರಾಜೆಕ್ಟ್ ಕೈಗೊಂಡಿಲ್ಲ. ರೆಸ್ಟ್ ಮಾಡುತ್ತೇನೆ ಎಂದ ಅವರು, ಡಬ್ಬಿಂಗ್ ಗೆ ಅವಕಾಶ ಕೊಟ್ಟರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಾದೇಶಿಕ ಭಾಷೆಯಲ್ಲಿ ಡಬ್ಬಿಂಗ್ ಗೆ ಅವಕಾಶ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಆದರೆ ಅದು ವಾಣಿಜ್ಯ ಮಂಡಳಿಗೆ ಬಿಟ್ಟ ವಿಚಾರವಾಗಿದೆ. ಮುಂದೆ ಇದಕ್ಕೆ ಅವಕಾಶ ಸಿಗಬಹುದು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...