alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸದ ಶ್ರೀರಾಮುಲುಗೆ ಉಪಹಾರಕ್ಕೆ ಆಹ್ವಾನಿಸಿದ ಡೊನಾಲ್ಡ್ ಟ್ರಂಪ್

ನವದೆಹಲಿ: ಬಳ್ಳಾರಿ ಸಂಸದ ಹಾಗೂ ಬಿ.ಜೆ.ಪಿ. ನಾಯಕ ಬಿ. ಶ್ರೀರಾಮುಲು ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಹಾರ ಕೂಟಕ್ಕೆ ಆಹ್ವಾನಿಸಿದ್ದಾರೆ.

ಅಮೆರಿಕ ಅಧ್ಯಕ್ಷರು 66 ನೇ ವಾರ್ಷಿಕ ಪ್ರಾರ್ಥನಾ ಕೂಟ ಆಯೋಜಿಸಿದ್ದು, ದೇಶ, ವಿದೇಶಗಳ ಪ್ರಮುಖರಿಗೆ ಭಾಗವಹಿಸಲು ಆಹ್ವಾನ ನೀಡಲಾಗಿದೆ.

ಭಾರತದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶ್ರೀರಾಮುಲು ಸೇರಿದಂತೆ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ. ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ಶ್ರೀರಾಮುಲು ಅಮೆರಿಕಕ್ಕೆ ತೆರಳುವುದು ಡೌಟ್. ಪಕ್ಷ ಸೂಚಿಸಿದಲ್ಲಿ ಅವರು ಅಮೆರಿಕಕ್ಕೆ ಹೋಗುವ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 8 ರಂದು ಡೊನಾಲ್ಡ್ ಟ್ರಂಪ್ ಆಯೋಜಿಸಿರುವ ಈ ಉಪಹಾರ ಕೂಟದಲ್ಲಿ ನಾನಾ ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಅಂತೆಯೇ ಶ್ರೀರಾಮುಲು ಅವರಿಗೆ ಆಹ್ವಾನ ನೀಡಲಾಗಿದ್ದು, ಅವರಿನ್ನೂ ಹೋಗುವ ಕುರಿತು ತೀರ್ಮಾನಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...