alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ನೋಟಿಸ್ ಗೆ ಹೀಗಿದೆ ಬಿ.ಎಸ್.ವೈ. ಉತ್ತರ

ಬೆಂಗಳೂರು: ವಿನಯ್ ಮೇಲೆ ಹಲ್ಲೆ ಮತ್ತು ಕಿಡ್ನಾಪ್ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಪೊಲೀಸ್ ನೋಟಿಸ್ ಗೆ ಯಡಿಯೂರಪ್ಪ ಉತ್ತರ ನೀಡಿದ್ದಾರೆ. ಸೆಪ್ಟಂಬರ್ 26 ರಂದು ಅವರು ಪತ್ರ ಬರೆದಿದ್ದು, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ತಮ್ಮ ಬಳಿ ಇರುವ ಯಾವ ವಸ್ತು, ದಾಖಲೆ ಬೇಕೆಂದು ಹೇಳಿಲ್ಲ. 65 ಕ್ಕೂ ಹೆಚ್ಚು ವಯಸ್ಸಾಗಿರುವ ನನ್ನನ್ನು ಠಾಣೆಗೆ ಕರೆಯಲಾಗಿದೆ. ಸಿ.ಆರ್.ಪಿ.ಸಿ. 160 ನೇ ಕಲಂ ಅನ್ವಯ ನೀವೇ ಬಂದು ಮಾಹಿತಿ ಪಡೆಯಬಹುದಾಗಿದೆ. ನೋಟಿಸ್ ನಲ್ಲಿರುವ ವಿಳಾಸಕ್ಕೆ ಬಂದು ಮಾಹಿತಿ ಪಡೆದಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದ್ದಾರೆ.

ಪ್ರಕರಣದ ಸತ್ಯಾಂಶ ಹೊರ ಬರಬೇಕಿದೆ. ಇದಕ್ಕಾಗಿ ನಾನು ಸಹಕಾರ ನೀಡುತ್ತೇನೆ. ನೀವೇ ಬಂದು ಮಾಹಿತಿ ಪಡೆಯಿರಿ ಎಂದು ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಬರೆದಿದ್ದಾರೆ ಎನ್ನಲಾದ ಪತ್ರ ತನಿಖಾಧಿಕಾರಿಗೆ ತಲುಪಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...