alex Certify
ಕನ್ನಡ ದುನಿಯಾ       Mobile App
       

Kannada Duniya

ಆತಿಥ್ಯ ನೀಡಿದವರನ್ನು ಸತ್ಕರಿಸಿದ ಬಿ.ಎಸ್.ವೈ.

ಬೆಂಗಳೂರು: ಬಿ.ಜೆ.ಪಿ. ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನ ತಮ್ಮ ನಿವಾಸದಲ್ಲಿ ದಲಿತ ಕುಟುಂಬದವರಿಗಾಗಿ ವಿಶೇಷ ಭೋಜನಕೂಟ ಏರ್ಪಡಿಸಿದ್ದರು.

ಬಿ.ಜೆ.ಪಿ. ವತಿಯಿಂದ ರಾಜ್ಯದಲ್ಲಿ ನಡೆಸಲಾದ ಜನಸಂಪರ್ಕ ಅಭಿಯಾನದಲ್ಲಿ ತಮ್ಮನ್ನು ಆಧರಿಸಿ ಉಪಹಾರ ನೀಡಿದ ಎಲ್ಲಾ 33 ಕುಟುಂಬದವರನ್ನು ತಮ್ಮ ಮನೆಗೆ ಯಡಿಯೂರಪ್ಪ ಬರಮಾಡಿಕೊಂಡಿದ್ದಾರೆ.

ನಿವಾಸಕ್ಕೆ ಆಗಮಿಸಿದ ದಲಿತ ಕುಟುಂಬದವರನ್ನು ಆತ್ಮೀಯವಾಗಿ ಆಹ್ವಾನಿಸಿ ಸತ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಎಂದೂ ಮರೆಯಲಾಗದ ಸಂದರ್ಭ ಇದಾಗಿದೆ. ದಲಿತರ ಕಾಲೋನಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಅವರ ಸಮಸ್ಯೆಗಳನ್ನು ನಿವಾರಿಸಲು ನನ್ನ ಜೀವನವನ್ನು ಮುಡಿಪಾಗಿಡುವೆ ಎಂದು ಹೇಳಿದ್ದಾರೆ.

ಜನ ಸಂಪರ್ಕ ಅಭಿಯಾನದ ಸಂದರ್ಭದಲ್ಲಿ ತಾವು ದಲಿತರ ಮನೆಗೆ ಭೇಟಿ ನೀಡಿದಾಗ, ಅವರೆಲ್ಲ ಯಾವುದಕ್ಕೂ ಜಗ್ಗದೇ ಆತಿಥ್ಯವನ್ನು ನೀಡಿದ್ದಾರೆ. ಅವರನ್ನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...