alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ. ಟಿಕೆಟ್ ಹಂಚಿಕೆಯಲ್ಲಿ ಬಿ.ಎಸ್.ವೈ. ಮೇಲುಗೈ

ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿ.ಜೆ.ಪಿ. ನಾಯಕರು ವರ್ಷಗಳ ಹಿಂದಿನಿಂದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನೂ ಘೋಷಿಸಿ ತಯಾರಿ ನಡೆಸಿದ್ದಾರೆ. ಬಿ.ಜೆ.ಪಿ. ವರಿಷ್ಠರು ಸಮೀಕ್ಷೆಗಳನ್ನು ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.

ಬಿ.ಜೆ.ಪಿ. ಪಟ್ಟಿಯಲ್ಲಿ ಯಡಿಯೂರಪ್ಪ ಬೆಂಬಲಿಗರಿಗೆ ಹೆಚ್ಚಿನ ಸ್ಥಾನ ಸಿಕ್ಕಿವೆ. ತುಮಕೂರಿನಲ್ಲಿ ಸೊಗಡು ಶಿವಣ್ಣಗೆ ಟಿಕೆಟ್ ತಪ್ಪಿದೆ. ಮೊದಲ ಪಟ್ಟಿಯಲ್ಲಿ ಸೋಮಣ್ಣ ಬೇವಿನ ಮರದ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಬಿ.ಜೆ.ಪಿ.ಗೆ ಸೇರ್ಪಡೆಯಾಗಿದ್ದ ಕುಮಾರ್ ಬಂಗಾರಪ್ಪ, ನೆ.ಲ ನರೇಂದ್ರ ಬಾಬು, ಸಂದೇಶ್ ಸ್ವಾಮಿ, ಅಶೋಕ್ ಪೂಜಾರಿ ಮೊದಲಾದವರಿಗೆ ಅವಕಾಶ ಸಿಕ್ಕಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಮತ್ತು ಕೆ.ಜೆ.ಪಿ.ಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದವರಲ್ಲಿ 43 ಮಂದಿಗೆ ಈ ಬಾರಿ ಬಿ.ಜೆ.ಪಿ. ಟಿಕೆಟ್ ಘೋಷಣೆಯಾಗಿದೆ. ಬಿ.ಎಸ್.ವೈ. ಬೆಂಬಲದಿಂದ ಸಾಗರದಲ್ಲಿ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ಸಿಕ್ಕಿದೆ. ಅದೇ ರೀತಿ ಕೃಷ್ಣಯ್ಯ ಶೆಟ್ಟಿ, ರೇಣುಕಾಚಾರ್ಯ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...