alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಪಕ್ಷೀಯರ ಷಡ್ಯಂತ್ರ ತಡೆಯಲು ಬಿ.ಎಸ್.ವೈ. ಮಾಸ್ಟರ್ ಪ್ಲಾನ್

ಲೋಕಸಭಾ ಚುನಾವಣೆ ಸಮರಕ್ಕೆ ಸಜ್ಜಾಗುತ್ತಿರುವ ರಾಜ್ಯ ಬಿಜೆಪಿ, ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಕಲ ಸಿದ್ಧತೆ ಕೈಗೊಂಡಿದ್ದು, ಈಗಾಗಲೇ ರಾಜ್ಯ ಪ್ರವಾಸ ಕೂಡ ಆರಂಭಿಸಿದೆ. ಇನ್ನು ಪಕ್ಷದೊಳಗಿನ ಷಡ್ಯಂತ್ರಗಳನ್ನು ಮಟ್ಟಹಾಕಲು ಮುಂದಾಗಿರುವ ಬಿ.ಎಸ್.ವೈ. ತಮ್ಮ ವಿರುದ್ಧ ಕಾರ್ಯತಂತ್ರ ರೂಪಿಸುವವರ ಕುರಿತು ಮಾಹಿತಿ ಕಲೆ ಹಾಕಲು ಕೆಲ ವ್ಯಕ್ತಿಗಳನ್ನು ನೇಮಕ ಮಾಡಿದ್ದಾರೆ ಎನ್ನಲಾಗಿದೆ.

ಪಕ್ಷದೊಳಗೇ ಕೆಲವರಿಗೆ ಯಡಿಯೂರಪ್ಪನವರ ಬಗ್ಗೆ ಅಸಮಾಧಾನವಿರುವುದರಿಂದ ಚುನಾವಣೆ ವೇಳೆ ಅವರು ತಮ್ಮ ವಿರುದ್ಧ ತಂತ್ರ ರೂಪಿಸಬಹುದು ಎಂಬ ಕಾರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಪಕ್ಷದೊಳಗಿನ ಎಲ್ಲ ನಾಯಕರ ಚಲನವಲನದ ಮಾಹಿತಿಯನ್ನು ಬಿ.ಎಸ್.ವೈ. ಕಲೆಹಾಕುತ್ತಿದ್ದಾರೆನ್ನಲಾಗಿದೆ.

ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಬಿಜೆಪಿ ಮುಖಂಡರು ಕೈಗೊಂಡಿರುವ ಪ್ರವಾಸ ತಂಡದಲ್ಲಿ ತಮ್ಮ ಆಪ್ತರೊಬ್ಬರನ್ನು ಯಡಿಯೂರಪ್ಪ ನೇಮಕ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ನೇತೃತ್ವದ ರಾಜ್ಯ ಪ್ರವಾಸ ತಂಡದಲ್ಲಿ ತಮ್ಮ ಆಪ್ತರಾದ ಅರವಿಂದ ಲಿಂಬಾವಳಿ, ಈಶ್ವರಪ್ಪನವರ ತಂಡದಲ್ಲಿ ಲಕ್ಷ್ಮಣ ಸವದಿ ಅವರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ಸ್ವಪಕ್ಷೀಯರ ಷಡ್ಯಂತ್ರ ತಡೆಯಲು ಯಡಿಯೂರಪ್ಪ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...