alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಚಾಲಕನೊಂದಿಗೆ ಪಾನಮತ್ತ ಯುವತಿಯರ ಜಟಾಪಟಿ ?

auto 12356ಆಟೋಚಾಲಕನೊಬ್ಬ ನಿಗದಿಪಡಿಸಿದ್ದಕ್ಕಿಂತ ದುಪ್ಪಟ್ಟು ಹಣ ಕೇಳಿದ್ದು, ಅದನ್ನು ಪ್ರಶ್ನಿಸಿದ ವೇಳೆ ಅಸಭ್ಯವಾಗಿ ವರ್ತಿಸಿದ್ದಾನೆಂದು ಯುವತಿಯರಿಬ್ಬರು ದೂರಿದ್ದರೆ, ಪಾನಮತ್ತರಾಗಿದ್ದ ಯುವತಿಯರು ತನ್ನನ್ನು ನಿಂದಿಸಿದ್ದಾರೆಂದು ಆಟೋ ಚಾಲಕ ಆರೋಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಉತ್ತರ ಭಾರತ ಮೂಲದ ಯುವತಿಯರಾದ ಕಲ್ಪನಾ ಹಾಗೂ ಐಶ್ವರ್ಯಾ ಕಳೆದ ರಾತ್ರಿ ಕಂಠೀರವ ಸ್ಟೇಡಿಯಂ ಬಳಿಯಿಂದ ಲ್ಯಾಲೆಲ್ಲಾ ರಸ್ತೆಗೆ ಹೋಗಲು ರಮೇಶ್ ಎಂಬಾತನ ಆಟೋ ಏರಿದ್ದಾರೆ.

ಈ ವೇಳೆ ಆಟೋ ಚಾಲಕ ದುಪ್ಪಟ್ಟು ಹಣ ಕೇಳಿದ್ದಾಗಿ ಯುವತಿಯರು ಹೇಳಿದ್ದು, ಇದನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆಂದು ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ಆಟೋ ಚಾಲಕ ರಮೇಶ್, ಪಾನಮತ್ತರಾಗಿದ್ದ ಯುವತಿಯರು ತನ್ನೊಂದಿಗೆ ವೃಥಾ ವಾಗ್ವಾದ ನಡೆಸಿದರೆಂದು ತಿಳಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...