alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಆಟೋದಲ್ಲಿನ ಪ್ರಯಾಣ ದರ 5 ಕಿ.ಮಿ. ಗೆ ಕೇವಲ 1 ರೂ.

ಕುಂದಾಪುರ ತಾಲೂಕಿನ ಹಂಗಳೂರು ವಿನಾಯಕ ಆಟೋ ಸ್ಟ್ಯಾಂಡ್ ನ ಆಟೋ ಚಾಲಕ ಸತೀಶ್ ಪ್ರಭು ಶನಿವಾರದಿಂದ ಐದು ದಿನಗಳ ಕಾಲ 5 ಕಿ.ಮೀ. ವರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೇವಲ ಒಂದು ರೂಪಾಯಿ ಪಡೆಯುತ್ತಿದ್ದಾರೆ.

ಸತೀಶ್ ಪ್ರಭು ಅವರ ಈ ನಿರ್ಧಾರದ ಹಿಂದೆ ಕಾರಣವೂ ಇಲ್ಲದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿರುವ ಸತೀಶ್ ಪ್ರಭು, ಕೇಂದ್ರ ಸರ್ಕಾರ 4 ವರ್ಷ ಪೂರೈಸಿ ಐದನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮಾಚರಣೆಗಾಗಿ ಈ ಕಾರ್ಯ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸತೀಶ್ ಪ್ರಭು ಈ ಕಾರ್ಯ ಮಾಡಿಕೊಂಡು ಬಂದಿದ್ದು, ಈಗ ಸರ್ಕಾರ 5ನೇ ವರ್ಷದ ಹೊಸ್ತಿಲಿನಲ್ಲಿರುವ ಹೊತ್ತಿನಲ್ಲಿ ಅದನ್ನು ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...