alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲ್ಮೆಟ್ ಧರಿಸದೆ ರಿಕ್ಷಾ ಚಲಾಯಿಸಿದ ಚಾಲಕನಿಗೆ ಬಿತ್ತು ದಂಡ…!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆಸುಪಾಸು ಇನ್ನು ಮುಂದೆ ಆಟೋರಿಕ್ಷಾ ಚಲಾಯಿಸುವವರೂ ಹೆಲ್ಮೆಟ್‌ ಹಾಕಬೇಕಂತೆ! ಆಶ್ಚರ್ಯ ಎಂದಾದರೂ ಇದು ನಿಜ. ಪೊಲೀಸರು ಮಾಡಿರುವ ಯಡವಟ್ಟಿಗೆ ಇದು ಒಂದು ಉದಾಹರಣೆಯಾಗಿದೆ. ಆಟೋ ಚಾಲಕನೊಬ್ಬನಿಗೆ ಹೆಲ್ಮೆಟ್‌ ಧರಿಸದ್ದಕ್ಕೆ ಫೈನ್‌ ಹಾಕಿ ರಸೀದಿ ಕೊಟ್ಟಿದ್ದಾರೆ ಪುತ್ತೂರಿನ ಪೊಲೀಸರು.

ಈ ರಸೀದಿಯನ್ನು ಸಾಮಾಜಿಕ ತಾಣಗಳಲ್ಲಿ ಹಾಕಲಾಗಿದ್ದು, ಪೊಲೀಸರು ಮಾಡಿರುವ ಯಡವಟ್ಟಿಗೆ ಈಗ ಗೇಲಿ ಮಾಡಲಾಗುತ್ತಿದೆ. 2 ರೀತಿಯ ಅಪರಾಧಗಳಿಗೆ ಚಾಲಕನಿಂದ 700 ರೂ. ದಂಡ ವಸೂಲಿ ಮಾಡಿರುವ ಪೊಲೀಸರು, ಸಾಮರ್ಥ್ಯಕ್ಕಿಂತ ಅಧಿಕ ಪ್ರಯಾಣಿಕರನ್ನು ಒಯ್ದಿರುವುದು ಹಾಗೂ ಹೆಲ್ಮೆಟ್‌ ಧರಿಸದೇ ಇರುವುದು ಎಂದು ಇದಕ್ಕೆ ರಸೀದಿಯಲ್ಲಿ ಕಾರಣ ನಮೂದಿಸಿದ್ದಾರೆ.

ಹಾಗೆಂದು ಇದು, ಪ್ರಿಂಟೆಡ್‌ ರಸೀದಿಯಲ್ಲ. ಪೊಲೀಸ್‌ ಅಧಿಕಾರಿಯೇ 2 ರೀತಿಯ ಅಪರಾಧಗಳನ್ನು ಪೆನ್ನಿನಲ್ಲಿ ಬರೆದು, ದಂಡ ವಸೂಲಿ ಮಾಡಿದ್ದಾರೆ.
9 ಮಂದಿ ಶಾಲಾ ಮಕ್ಕಳನ್ನು ಕರೆದುಕೊಂಡು ವಿಠಲ ಎಂಬ ರಿಕ್ಷಾ ಚಾಲಕ ಸಾಗುತ್ತಿದ್ದಾಗ, ಪೊಲೀಸರು ಹಿಡಿದು ದಂಡ ಹಾಕಿದ್ದಾರೆ. ಆದರೆ ಈ ಬಗ್ಗೆ ವಿಚಾರಿಸಿದಾಗ, ಇಂತಹ ಯಾವುದೇ ಘಟನೆ ನಡೆದೇ ಇಲ್ಲ ಎಂದು ಪೊಲೀಸರು ಉತ್ತರಿಸಿದ್ದಾರೆ. ಆದರೆ ರಿಕ್ಷಾ ಚಾಲಕನಲ್ಲಿ ಈ ಕುರಿತು ರಸೀದಿ ನಂಬರ್‌ ಸೇರಿದಂತೆ ಎಲ್ಲ ದಾಖಲೆಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...