alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ಬಿಯರ್ ಬಾಟಲ್ ನಿಂದ ಹೊಡೆದ ದುಷ್ಕರ್ಮಿಗಳು: ಕೋಮಾಗೆ ಜಾರಿದ ಯುವಕ

ಬೆಂಗಳೂರು: ಆಕಸ್ಮಿಕವಾಗಿ ಕಾಲು ತಾಗಿದ್ದಕ್ಕೆ ಯುವಕನ ಮೇಲೆ ಬಿಯರ್ ಬಾಟಲ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಯುವಕ ಕೋಮಾ ಸ್ಥಿತಿಗೆ ಜಾರಿರುವ ಘಟನೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ರಿನೈಸಾನ್ಸ್ ಹೋಟೆಲ್​ನಲ್ಲಿ ನಡೆದಿದೆ.

ಯುವರಾಜ್ ಹಲ್ಲೆಗೊಳಗಾಗಿ ಕೋಮಾಗೆ ಜಾರಿರುವ ಯುವಕ. ಕಾರ್ತಿಕ್ ಹಾಗೂ ಯುವರಾಜ್ ಎಂಬ ಸ್ನೇಹಿತರು ತಡರಾತ್ರಿ ರಿನೈಸಾನ್ಸ್ ಹೋಟೆಲ್​ಗೆ ಊಟಕ್ಕೆಂದು ತೆರಳಿದ್ದರು. ಊಟ ಮುಗಿಸಿ ಹ್ಯಾಂಡ್ ವಾಶ್​​ ಮಾಡಿ ವಾಪಸ್ ಆಗುತ್ತಿದ್ದಾಗ ಯುವರಾಜ್ ಕಾಲು ವ್ಯಕ್ತಿಯೊಬ್ಬನಿಗೆ ಅಕಸ್ಮಾತ್ ಆಗಿ ತಗುಲಿದೆ. ಇದರಿಂದ ಕೋಪೋದ್ರಿಕ್ತನಾದ ವ್ಯಕ್ತಿ ಯುವರಾಜ್ ಗೆ ಅವಾಚ್ಯ ಶಬ್ದಗಳಿಂದ ಬೈಯ್ಯಲು ಆರಂಭಿಸಿದ್ದಾನೆ. ಮಾತಿಗೆ ಮಾತು ಆರಂಭವಾಗಿ ಜಗಳ ವಿಕೋಪಕ್ಕೆ ತಿರುಗಿದೆ.

ಅಷ್ಟರಲ್ಲಿ ವ್ಯಕ್ತಿಯ ಜತೆಗಿದ್ದ ಇತರರು ಆಗಮಿಸಿ ಯುವರಾಜ್ ಸ್ನೇಹಿತ ಕಾರ್ತಿಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಹೋಟೆಲ್ ನಲ್ಲಿದ್ದ ಬಿಯರ್ ಬಾಟಲ್ ನ್ನು ತೆಗೆದುಕೊಂಡು ಯುವರಾಜ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ರಕ್ತಸ್ರಾವವಾಗಿ ಕುಸಿದುಬಿದ್ದ ಯುವರಾಜ್ ಕೋಮಾಗೆ ಜಾರಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈವರೆಗೂ ಪ್ರಜ್ಞೆ ಬಂದಿಲ್ಲ. ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...