alex Certify
ಕನ್ನಡ ದುನಿಯಾ       Mobile App
       

Kannada Duniya

ದೂರು ನೀಡಲು ಬಂದ ವ್ಯಕ್ತಿ ಮೇಲೆ ಕಾಂಗ್ರೆಸ್ ಸದಸ್ಯನಿಂದ ಮಾರಣಾಂತಿಕ ಹಲ್ಲೆ

ಕೋಲಾರ: ಕಾಲುವೆ ತೆರವುಗೊಳಿಸುವಂತೆ ದೂರು ನೀಡಲು ತೆರಳಿದ್ದ ವ್ಯಕ್ತಿಯ ಮೇಲೆಯೇ ಕಾಂಗ್ರೆಸ್ ಸದಸ್ಯ ಹಾಗೂ ಆತನ ಸಹಚರರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಭಾಸ್ಕರ್ ಹಲ್ಲೆಗೊಳಗಾದ ವ್ಯಕ್ತಿ. ಕಾಲುವೆ ತೆರವುಗೊಳಿಸುವಂತೆ ಕೆಜಿಎಫ್ ನಗರಸಭೆಗೆ ಭಾಸ್ಕರ್ ದೂರು ನೀಡಲು ತೆರಳಿದ್ದರು. ಈ ವೇಳೆ ನಗರಸಭೆ ವಾರ್ಡ್ ನಂ 33 ರ ಕಾಂಗ್ರೆಸ್ ಸದಸ್ಯ ಸ್ಟಾನ್ಲಿ ಮತ್ತು ಆತನ ಸಹಚರರು, ಭಾಸ್ಕರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ಭಾಸ್ಕರ್ ಕುಸಿದು ಬಿದ್ದಿದ್ದಾರೆ.

ನಗರಸಭೆಯ ಆಯುಕ್ತ ಶ್ರೀಕಾಂತ್ ಎದುರಲ್ಲೇ ಭಾಸ್ಕರ್ ಮೇಲೆ ಸ್ಟಾನ್ಲಿ ಗುಂಪು ಹಲ್ಲೆ ನಡೆಸಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದರೆ ಹಲ್ಲೆ ನಡೆದ ಬಗ್ಗೆ ಭಾಸ್ಕರ್ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ. ಸಧ್ಯ ಭಾಸ್ಕರ್ ಅವರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...