alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರಿಗೆ ಹಾರ ಹಾಕಲು ಹೋದ ದಲಿತರ ಮೇಲೆ ಹಲ್ಲೆ

ಗ್ರಾಮದ ದೇವಾಲಯದಲ್ಲಿರುವ ಆಂಜನೇಯ ವಿಗ್ರಹಕ್ಕೆ ಹಾರ ಹಾಕಲು ತೆರಳಿದ್ದ ದಲಿತರ ಮೇಲೆ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕು ಹರಮಘಟ್ಟದಲ್ಲಿ ನಡೆದಿದೆ.

ಗುರುವಾರ ಭೂಮಿ ಹುಣ್ಣಿಮೆ ಆಚರಿಸಲಾಗಿದ್ದು, ಹರಮಘಟ್ಟ ಗ್ರಾಮದ ದಲಿತ ಯುವಕರು ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ಹಾರ ಹಾಕಲು ಮುಂದಾಗಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಕೆಲವರು ಅವರನ್ನು ಹೊರಗೆ ಕಳುಹಿಸಿದರೆನ್ನಲಾಗಿದೆ.

ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ದಲಿತ ಯುವಕರ ಮೇಲೆ ಕೆಲವರು ಹಲ್ಲೆ ಮಾಡಿದ್ದಲ್ಲದೆ ಒಂದು ಸೈಕಲ್ ಶಾಪ್ ಧ್ವಂಸ ಮಾಡಿದ್ದಾರೆ. ಜೊತೆಗೆ ಗ್ರಾಮದಲ್ಲಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫ್ಲೆಕ್ಸಿಯನ್ನು ಹರಿದಿದ್ದಾರೆ.

ತಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ದಲಿತರು ಧರಣಿ ನಡೆಸುತ್ತಿದ್ದು, ಗ್ರಾಮದಲ್ಲೀಗ ಬಿಗುವಿನ ವಾತಾವರಣವಿದೆ. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...