alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಸಲು ನಿರಾಕರಿಸಿದಾಕೆಗೆ ಹೆಲ್ಮೆಟ್ ನಿಂದ ಹೊಡೆದ ಯುವಕ

couples-fighting

ಚಿಕ್ಕಮಗಳೂರು: ಪಿಜಿಯಲ್ಲಿದ್ದುಕೊಂಡು ಕಾಲೇಜು ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಪ್ರೀತಿಸುವಂತೆ ಗಂಟು ಬಿದ್ದಿದ್ದ ಯುವಕನೊಬ್ಬ ಆಕೆ ನಿರಾಕರಿಸಿದ ಕಾರಣಕ್ಕೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ವಿಜಯಪುರ ಬಡಾವಣೆಯಲ್ಲಿನ ಮನೆಯೊಂದರಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದುಕೊಂಡು ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಳಸ ಮೂಲದ ಯುವತಿಯ ಹಿಂದೆ ಹಿರೇಬೈಲ್ ನ ಸಂಜಯ್ ಎಂಬಾತ ಬಿದ್ದಿದ್ದು, ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನೆನ್ನಲಾಗಿದೆ.

ಸಂಜಯ್ ನ ಕೋರಿಕೆಯನ್ನು ಯುವತಿ ತಿರಸ್ಕರಿಸಿದ್ದು, ಇದರಿಂದ ಆಕ್ರೋಶಗೊಂಡಿದ್ದ ಆತ ಮಂಗಳವಾರ ಬೆಳಿಗ್ಗೆ ಪಿಜಿಗೆ ಬಂದು ಯುವತಿಯೊಂದಿಗೆ ಜಗಳವಾಡಿ ಬಳಿಕ ತನ್ನ ಬಳಿಯಿದ್ದ ಹೆಲ್ಮೆಟ್ ನಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಯುವತಿ ಕಿರುಚಿಕೊಂಡಿದ್ದು, ತಕ್ಷಣ ಬಂದ ಸ್ಥಳೀಯರು ಸಂಜಯ್ ನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ಸಂಬಂಧ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...