alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ಚಾಲಕನ ಮೇಲೆ ಅರಣ್ಯ ಸಿಬ್ಬಂದಿಯಿಂದ ಹಲ್ಲೆ

aynur-- (3)

ಸಿರಿಗೆರೆ ಅರಣ್ಯ ವ್ಯಾಪ್ತಿಯಲ್ಲಿ ತನ್ನ ಮನೆಗೆ ಹೋಗುತ್ತಿದ್ದ ಬಸ್ ಡ್ರೈವರ್ ಎಸ್.ಎಂ. ಮಧುಸೂದನ್ ಎಂಬವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡ ಮಧುಸೂದನ್ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮಧುಸೂದನ್ ಸಿರಿಗೆರೆ ಮೂಲದವರಾಗಿದ್ದು, ಬಸ್ ಡ್ರೈವರ್ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ತನ್ನ ಡ್ರೈವರ್ ಕೆಲಸ ಮುಗಿಸಿ ರಾತ್ರಿ 10 ಗಂಟೆ ಹೊತ್ತಿಗೆ ಬಿಲ್ಗುಣಿಯಲ್ಲಿ ಬಸ್ ನಿಲ್ಲಿಸಿ ಬೈಕ್ ಏರಿ ರಾತ್ರಿ 10 ಗಂಟೆ 15 ನಿಮಿಷಕ್ಕೆ ಗದ್ದೆ ಮಾರ್ಗದಲ್ಲಿ ಮನೆ ಇರುವ ಮಂಜೇರಿಕೊಪ್ಪಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾಲು, ಕೈ ಮತ್ತು ಕುತ್ತಿಗೆ ಭಾಗಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ತಾನು ಮನೆಗೆ ಹೋಗುತ್ತಿರುವುದಾಗಿ ಹೇಳಿದರೂ ಕೇಳದೆ, ಇಷ್ಟು ಹೊತ್ತಿನಲ್ಲಿ ನಿನಗೇನು ಕೆಲಸ ಇಲ್ಲಿ ಎಂದು ಬೆದರಿಕೆ ಒಡ್ಡಿ, ತೀವ್ರತರದ ಹಲ್ಲೆ ನಡೆಸಿದ್ದು, ಕೈ ಹಾಗೂ ಬೆರಳಿನ ಮೂಳೆ ಮುರಿದಿದೆ. ಕುತ್ತಿಗೆ ಭಾಗಕ್ಕೆ ಹೊಡೆದಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದ ನನ್ನನ್ನು ಗ್ರಾಮಸ್ಥರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮಧುಸೂದನ್ ತಿಳಿಸಿದ್ದಾರೆ. ಈ ಬಗ್ಗೆ ಕುಂಸಿ ಪೊಲೀಸರು ಕೂಡಾ ಆಸ್ಪತ್ರೆಗೆ ಬಂದು ಗಾಯಾಳುವಿನಿಂದ ಸಂಪೂರ್ಣ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...