alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮನೆಯಲ್ಲೇ ವಧುವಿನ ಮೇಲೆ ಭಗ್ನ ಪ್ರೇಮಿಯಿಂದ ಹಲ್ಲೆ

ಶಿವಮೊಗ್ಗ : ಮದುವೆ ಮನೆಯಲ್ಲೇ ವಧುವಿನ ಮೇಲೆ ಭಗ್ನ ಪ್ರೇಮಿ ಹಲ್ಲೆ ನಡೆಸಿದ ಘಟನೆ ಸಾಗರ ತಾಲ್ಲೂಕಿನ ಭೀಮನಕೋಣೆಯಲ್ಲಿ ನಡೆದಿದೆ.

ಕಾಪ್ಟೆ ಮನೆಯ ವರನ ಸ್ವಗೃಹದಲ್ಲಿ ವಿವಾಹ ಸಮಾರಂಭ ನಡೆಯುತ್ತಿರುವ ವೇಳೆ ವಧುವಿನ ಮೇಲೆ ಭಗ್ನ ಪ್ರೇಮಿ ಹಲ್ಲೆ ಮಾಡಿದ್ದಾನೆ. ಭರತ್ ಹಾಗೂ ಯುವತಿ ಮದುವೆ ಬಂಧು ಬಾಂಧವರ ಸಮ್ಮುಖದಲ್ಲಿ ನೆರವೇರುವ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಭಗ್ನ ಪ್ರೇಮಿ ನಂದನ್, ಮಧು ಮಗಳ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

ಈ ಸಂದರ್ಭದಲ್ಲಿ ತಡೆಯಲು ಬಂದ ಯುವತಿಯ ಚಿಕ್ಕಪ್ಪ ಗಂಗಾಧರಪ್ಪ ಅವರ ಮೇಲೆಯೂ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ಹಲ್ಲೆಗೊಳಗಾದ ವಧು ಹಾಗೂ ಗಂಗಾಧರಪ್ಪ ಅವರನ್ನು ಕೂಡಲೇ ಸಾಗರ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳದಲ್ಲಿದ್ದ ಬಂಧುಗಳು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...