alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಗೆ ಬಂದವರಿಗೆ ಅಚ್ಚರಿ, ಕಾರಣ ಗೊತ್ತಾ?

Indicash-ATM-

ರಾಯಚೂರು: ಕಳ್ಳರು ಚಿನ್ನಾಭರಣ, ಮನೆಕಳವು ಮಾಡುವುದನ್ನು ಬಿಟ್ಟಿದ್ದು, ಎಟಿಎಂ ಕದಿಯುವ ಸುಲಭ ದಾರಿಯನ್ನು ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಎಟಿಎಂ ಧ್ವಂಸಗೊಳಿಸಿ ಹಣ ದೋಚುವುದನ್ನು, ಇಲ್ಲವೇ ದೋಚಲು ಪ್ರಯತ್ನಿಸುವುದನ್ನು ನೋಡಿರುತ್ತೀರಿ.

ರಾಯಚೂರಿನಲ್ಲಿ ಎಟಿಎಂ ಯಂತ್ರವನ್ನೇ ದೋಚಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಇಂಡಿ ಕ್ಯಾಶ್ ಬ್ಯಾಂಕ್ ಗೆ ಸೇರಿದ ಎಟಿಎಂ ಅನ್ನು ತಡರಾತ್ರಿ ಕಳ್ಳರು ದೋಚಿದ್ದಾರೆ. ಈ ಎಟಿಎಂಗೆ ಭದ್ರತೆ ಸಿಬ್ಬಂದಿ ಇರಲಿಲ್ಲ ಎನ್ನಲಾಗಿದ್ದು, ಕಳ್ಳರು ಮೊದಲೇ ಸಂಚು ರೂಪಿಸಿ, ಜನರೆಲ್ಲಾ ಮಲಗಿದ್ದ ಸಂದರ್ಭದಲ್ಲಿ ವಾಹನವೊಂದರಲ್ಲಿ ಎಟಿಎಂ ಯಂತ್ರವನ್ನೇ ತೆಗೆದುಕೊಂಡು ಹೋಗಿದ್ದಾರೆ. ಬೆಳಿಗ್ಗೆ ಹಣ ಡ್ರಾ ಮಾಡಲು ಎಟಿಎಂ ಗೆ ಬಂದವರಿಗೆ ಶಾಕ್ ಕಾದಿತ್ತು.

ಎಟಿಎಂ ಸೆಂಟರ್ ನಲ್ಲಿ ಯಂತ್ರವೇ ಇರಲಿಲ್ಲ. ಆಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಸಿರಿವಾರ ಠಾಣೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...