alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಕಳ್ಳರು

Indicash-ATMಎಟಿಎಂ ಕೇಂದ್ರದ ಶಟರ್ ಮುರಿದು ಒಳ ನುಗ್ಗಿರುವ ಕಳ್ಳರು ಸಿಸಿ ಟಿವಿ ಕ್ಯಾಮರಾದ ವೈರ್ ಕತ್ತರಿಸಿ ಬಳಿಕ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅರಕೆರಾ ಗ್ರಾಮದಲ್ಲಿ ನಡೆದಿದೆ.

ಕಳೆದ ರಾತ್ರಿ ಈ ಘಟನೆ ನಡೆದಿದ್ದು, ತಮ್ಮ ಗುರುತು ಸಿಸಿ ಟಿವಿ ಯಲ್ಲಿ ಸೆರೆಯಾಗಬಾರದೆಂಬ ಕಾರಣಕ್ಕೆ ಇಂಡಿಕ್ಯಾಶ್ ಎಟಿಎಂ ಕೇಂದ್ರದಲ್ಲಿದ್ದ ಸಿಸಿ ಟಿವಿ ಕ್ಯಾಮರಾದ ವೈರ್ ಕತ್ತರಿಸಿದ ಬಳಿಕ ಈ ಕೃತ್ಯ ಎಸಗಲಾಗಿದೆ.

ಈ ಹಿಂದೆಯೂ ರಾಯಚೂರು ಜಿಲ್ಲೆಯಲ್ಲಿ ಇಂಡಿಕ್ಯಾಶ್ ಎಟಿಎಂ ಯಂತ್ರ ಹೊತ್ತೊಯ್ದಿದ್ದ ಘಟನೆ ನಡೆದಿದ್ದು, ಇಂಡಿಕ್ಯಾಶ್ ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದೇ ಈ ಕೃತ್ಯ ನಡೆಯಲು ಕಾರಣವೆಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಕರಣ ದಾಖಲಿಸಿಕೊಂಡಿರುವ ದೇವದುರ್ಗ ಠಾಣೆ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...