alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಬಳಕೆದಾರರಿಗೊಂದು ಸೂಚನೆ

atm

ಶಿವಮೊಗ್ಗ: ಇತ್ತೀಚೆಗೆ ಬ್ಯಾಂಕ್ ಖಾತೆದಾರರನ್ನು ವಂಚಿಸುವ ಅನೇಕ ಪ್ರಕರಣಗಳು ನಡೆದಿವೆ. ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಎಟಿಎಂ ಪಾಸ್ ವರ್ಡ್ ಕೇಳುವ ವಂಚಕರು, ಜನ ಎಚ್ಚೆತ್ತುಕೊಳ್ಳುವ ಮೊದಲೇ ಹಣ ಎಗರಿಸಿರುತ್ತಾರೆ.

ಹೀಗೆ ವಿವಿಧ ರೀತಿಯಲ್ಲಿ ಖಾತೆದಾರರು ವಂಚನೆಗೆ ಒಳಗಾಗುವುದನ್ನು ನೋಡಿರುತ್ತೀರಿ. ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯಲ್ಲಿ ಅಪರಿಚಿತನೊಬ್ಬ ಮಹಿಳೆಯ ಎಟಿಎಂ ಬಳಸಿ ಹಣ ಪಡೆದುಕೊಂಡ ವರದಿಯಾಗಿದೆ. ಅರಸಾಳು ಗ್ರಾಮದ ಮಹಿಳೆ ಕರ್ನಾಟಕ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದು, ಎಟಿಎಂ ಕಾರ್ಡ್ ಪಡೆದುಕೊಂಡಿದ್ದರು. ಮರೆವಿನ ಕಾರಣದಿಂದ ಎಟಿಎಂ ಕಾರ್ಡ್ ಮೇಲೆಯೇ ಪಿನ್ ನಮೂದಿಸಿದ್ದರು.

ರಿಪ್ಪನ್ ಪೇಟೆಯ ಎಟಿಎಂನಲ್ಲಿ ತಮ್ಮ ಖಾತೆಯಿಂದ ಹಣ ಪಡೆದುಕೊಂಡ ಅವರು, ಅಲ್ಲಿಯೇ ಕಾರ್ಡ್ ಮರೆತು ಹೋಗಿದ್ದು, ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ತಾನೇ ಕಾರ್ಡ್ ಬಳಸಿ 10,500 ರೂ. ಡ್ರಾ ಮಾಡಿದ್ದಾನೆ.

ಆಕೆ ಕಾರ್ಡ್ ಮರೆತಿದ್ದು ನೆನಪಾಗಿ ವಾಪಸ್ ಬರುವಷ್ಟರಲ್ಲಿ ಹಣ ಡ್ರಾ ಮಾಡಿರುವುದು ಗೊತ್ತಾಗಿದೆ. ಸಿಸಿ ಟಿವಿಯಲ್ಲಿ ವಂಚಕನ ಚಿತ್ರ ಸೆರೆಯಾಗಿದೆ. ಕೆಲವರು ಕಾರ್ಡ್ ಮೇಲೆಯೇ ಪಿನ್ ಸಂಖ್ಯೆ ಬರೆದಿಟ್ಟುಕೊಳ್ಳುವುದರಿಂದ ವಂಚಕರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕೆಂದು ಸೂಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...