alex Certify
ಕನ್ನಡ ದುನಿಯಾ       Mobile App
       

Kannada Duniya

ATM ಪಾಸ್ ವರ್ಡ್ ಬದಲಿಸಿ 11 ಲಕ್ಷ ರೂ. ಕಳವು

ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಎ.ಟಿ.ಎಂ.ಗೆ ಹಣ ತುಂಬುವ ಸಿಬ್ಬಂದಿಯೇ ಲಕ್ಷಾಂತರ ರೂ. ದೋಚಿದ ಆರೋಪ ಕೇಳಿ ಬಂದಿದೆ.

ನಾಗಮಂಗಲದ ಪಿ.ಬಿ. ಬಡಾವಣೆಯ ಕಾರ್ಪೋರೇಷನ್ ಬ್ಯಾಂಕ್ ಎ.ಟಿ.ಎಂ. ಸೇರಿ 4 ಎ.ಟಿ.ಎಂ.ಗಳಲ್ಲಿನ ಪಾಸ್ ವರ್ಡ್ ಬದಲಿಸಿ ಹಣ ದೋಚಲಾಗಿದೆ. ಕಾರ್ಪೋರೇಷನ್ ಬ್ಯಾಂಕ್ ಎ.ಟಿ.ಎಂ.ನಲ್ಲಿ 11 ಲಕ್ಷ ರೂ. ಸೇರಿ ಇನ್ನೂ ಹೆಚ್ಚಿನ ಹಣ ದೋಚಲಾಗಿದೆ. ಪಾಸ್ ವರ್ಡ್ ಬದಲಿಸಿರುವ ಕಾರಣ ಉಳಿದ ಎ.ಟಿ.ಎಂ.ಗಳಲ್ಲಿ ಕಳವಾದ ಹಣದ ಮೊತ್ತ ತಿಳಿದು ಬಂದಿಲ್ಲ.

ಹಣ ತುಂಬುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ತಾಲ್ಲೂಕಿನ ಅರುಣ್ ಕುಮಾರ್ ಎ.ಟಿ.ಎಂ. ಪಾಸ್ ವರ್ಡ್ ಬದಲಿಸಿ ಹಣ ದೋಚಿದ್ದಾನೆ. ನಾಗಮಂಗಲ ಪಟ್ಟಣ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...