alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಯಂತ್ರ ಕದ್ದೊಯ್ದ ಖತರ್ನಾಕ್ ಕಳ್ಳರು

indsd-qTu3g

ಎಟಿಎಂ ನಲ್ಲಿ ಹಣ ಎಗರಿಸುವುದು ಅಥವಾ ಎಟಿಎಂ ನಿಂದ ಹಣ ತೆಗೆದುಕೊಳ್ಳಲು ಹೋದವರ ಮೇಲೆ ಹಲ್ಲೆ ನಡೆಸಿ ಹಣ ಲಪಟಾಯಿಸುವುದು ಮಾಮೂಲು. ಆದರೆ ಟಾಟಾ ಇಂಡಿಕ್ಯಾಶ್‌ಗೆ ಸೇರಿದ ಎಟಿಎಂ ಅನ್ನೇ ಕದ್ದೊಯ್ದಿರುವ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನಡೆದಿದೆ.

ಹೌದು. ಇಲ್ಲಿನ ಹಂಪಸಾಗರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕಳ್ಳತನಕ್ಕೂ ಮುಂಚೆ ಎಟಿಎಂ ಕೇಂದ್ರದ ಒಳಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕ ಹಾಗೂ ತಂತಿಗಳನ್ನು ತುಂಡರಿಸಿದ ಕಳ್ಳರು ಎಟಿಎಂ ಅನ್ನೇ ಕದ್ದೊಯ್ದಿದ್ದಾರೆ.

ಶನಿವಾರ ಬೆಳಗ್ಗೆ ಸಾರ್ವಜನಿಕರು ಎಟಿಎಂ ಗೆ ಆಗಮಿಸಿದಾಗ ಈ ವಿಷಯ ತಿಳಿದು ಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಸ್ಥಳಕ್ಕೆ ಶ್ವಾನದಳದೊಂದಿಗೆ ಬಂದು ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...