alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದ್ ಆದ್ವು ಭದ್ರತೆ ಇಲ್ಲದ ಎ.ಟಿ.ಎಂ. ಗಳು

ದಾವಣಗೆರೆ: ಎ.ಟಿ.ಎಂ. ಕೇಂದ್ರಗಳಿಗೆ ಭದ್ರತೆ ಒದಗಿಸುವಂತೆ ಹಿಂದೆಯೇ ಸೂಚನೆ ನೀಡಲಾಗಿತ್ತಾದರೂ, ಇನ್ನೂ ಅನೇಕ ಬ್ಯಾಂಕ್ ಎ.ಟಿ.ಎಂ.ಗಳಿಗೆ ಭದ್ರತೆ ಇಲ್ಲವಾಗಿದೆ.

ನಗರದ ಜಯದೇವ ಸರ್ಕಲ್ ನಲ್ಲಿ ಹೀಗೆ ಭದ್ರತೆ ಇಲ್ಲದ ಆಕ್ಸಿಸ್ ಬ್ಯಾಂಕ್ ಎ.ಟಿ.ಎಂ.ನಿಂದ ಇತ್ತೀಚೆಗೆ ಸುಮಾರು 5 ಲಕ್ಷ ರೂ. ಹಣ ದೋಚಲಾಗಿತ್ತು.

ಈ ಹಿನ್ನಲೆಯಲ್ಲಿ ದಾವಣಗೆರೆ ಪೊಲೀಸರು ಎ.ಟಿ.ಎಂ.ಗಳಿಗೆ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಸೂಚನೆ ನೀಡಿದ್ದಾರೆ.

ಆದರೂ ಭದ್ರತೆ ಕಲ್ಪಿಸದ ಎ.ಟಿ.ಎಂ.ಗಳನ್ನು ಬಂದ್ ಮಾಡಿಸಿದ್ದಾರೆ. ದಾವಣಗೆರೆಯಲ್ಲಿ 30 ಕ್ಕೂ ಅಧಿಕ ಎ.ಟಿ.ಎಂ.ಗಳಿಗೆ ಸೆಕ್ಕೂರಿಟಿ ಗಾರ್ಡ್ ಗಳಿಲ್ಲ. ಅಂತಹ ಎ.ಟಿ.ಎಂ.ಗಳಿಗೆ ಬೀಗ ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...