alex Certify
ಕನ್ನಡ ದುನಿಯಾ       Mobile App
       

Kannada Duniya

ಗೊತ್ತಿಲ್ಲದಂತೆ 10 ನಿಮಿಷದಲ್ಲಿ ಡ್ರಾ ಆಯ್ತು 70,000 ರೂ.

nir-atm

ದಾವಣಗೆರೆ: ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಫೋನ್ ಮಾಡಿ, ವ್ಯಕ್ತಿಯನ್ನು ವಂಚಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಚನ್ನಗಿರಿ ತಾಲ್ಲೂಕು ಸೋಮಲಾಪುರ ಗ್ರಾಮದ ನಾಗರಾಜ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ಹಿಂದಿಯಲ್ಲಿ ಮಾತನಾಡಿದ್ದು, ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ.

ಆತನ ಮಾತು ನಂಬಿದ ನಾಗರಾಜ್, ತಮ್ಮ ಎ.ಟಿ.ಎಂ. ಪಿನ್ ಸಂಖ್ಯೆ ಹೇಳಿದ್ದು, ಇದಾದ 10 ನಿಮಿಷದ ಅವಧಿಯಲ್ಲಿ ಅವರ ಖಾತೆಯಿಂದ 70,000 ರೂ. ಹಣ ವಿತ್ ಡ್ರಾ ಆಗಿದೆ.

ತಮ್ಮ ಖಾತೆಯಿಂದ ಹಣ ಪಡೆದುಕೊಂಡಿರುವ ಬಗ್ಗೆ ಮೆಸೇಜ್ ಬಂದಿದ್ದರಿಂದ, ಕಂಗಾಲಾದ ನಾಗರಾಜ್ ತಮ್ಮ ಖಾತೆ ಇರುವ ಕೆರೆಬಿಳಚಿ ಎಸ್.ಬಿ.ಐ. ಶಾಖೆ ಅಧಿಕಾರಿಗೆ ತಿಳಿಸಿದ್ದಾರೆ.

ಬಳಿಕ ಬಸವಾಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಗುಜರಾತ್ ಮೂಲದ ನಂಬರ್ ನಿಂದ ನಾಗರಾಜ್ ಅವರಿಗೆ ಫೋನ್ ಬಂದಿದ್ದು, ಕರೆ ಮಾಡಿದ್ದ ವ್ಯಕ್ತಿ ಹಿಂದಿಯಲ್ಲಿ ಮಾತಾಡಿ ಎ.ಟಿ.ಎಂ. ಪಾಸ್ ವರ್ಡ್ ಪಡೆದುಕೊಂಡಿದ್ದಾನೆ. ಬಳಿಕ ಹಣ ವಿತ್ ಡ್ರಾ ಮಾಡಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...