alex Certify
ಕನ್ನಡ ದುನಿಯಾ       Mobile App
       

Kannada Duniya

ATM ನಲ್ಲೇ ನಡೆದಿದೆ ಆಘಾತಕಾರಿ ಘಟನೆ

ಧಾರವಾಡ: ಎ.ಟಿ.ಎಂ.ಗೆ ಹಣ ತೆಗೆದುಕೊಳ್ಳಲು ಬಂದಿದ್ದ ಉಪನ್ಯಾಸಕಿಯೊಬ್ಬರ ಕತ್ತು ಹಿಸುಕಿ, ಹಣ ಕಸಿಯಲು ಯತ್ನಿಸಿದ ಘಟನೆ ಧಾರವಾಡದ ವಿದ್ಯಾಗಿರಿಯಲ್ಲಿ ನಡೆದಿದೆ.

ಜೆ.ಎಸ್.ಎಸ್. ಕಾಲೇಜ್ ನಲ್ಲಿ ಉಪನ್ಯಾಸಕರಾಗಿರುವ ಹುಬ್ಬಳ್ಳಿ ನವನಗರ ನಿವಾಸಿ ಮಹಿಳೆ, ಸಿಂಡಿಕೇಟ್ ಬ್ಯಾಂಕ್ ಗೆ ಸೇರಿದ ಎ.ಟಿ.ಎಂ.ಗೆ ಹಣ ತೆಗೆದುಕೊಳ್ಳಲು ಹೋಗಿದ್ದಾರೆ.

ಕಾರ್ಡ್ ಹಾಕಿ ಹಣ ತೆಗೆದುಕೊಳ್ಳುವಾಗ, ಎ.ಟಿ.ಎಂ. ಒಳಗೆ ನುಗ್ಗಿದ ತೇಜಸ್ವಿನಗರ ನಿವಾಸಿ ಶಿವಾಜಿ ಎಂಬಾತ, ಉಪನ್ಯಾಸಕಿಯ ಕತ್ತು ಹಿಸುಕಿ ಹಣ ಕಸಿಯಲು ಯತ್ನಿಸಿದ್ದಾನೆ.

ಉಪನ್ಯಾಸಕಿ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಬಂದಿದ್ದು, ಆರೋಪಿಯನ್ನು ಥಳಿಸಿದ್ದಾರೆ. ಬಳಿಕ ವಿದ್ಯಾಗಿರಿ ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...