alex Certify
ಕನ್ನಡ ದುನಿಯಾ       Mobile App
       

Kannada Duniya

ನಮೂದಿಸಿದ್ದಕ್ಕಿಂತ ಜಾಸ್ತಿ ಹಣ ಕೊಟ್ಟ ಎ.ಟಿ.ಎಂ.ಗೆ ಮುಗಿಬಿದ್ದ ಜನ

atm-mond-evn

ಬೆಂಗಳೂರು: ಎ.ಟಿ.ಎಂ. ಒಂದರಲ್ಲಿ ತಾಂತ್ರಿಕ ದೋಷದಿಂದಾಗಿ ನಮೂದಿಸಿದ್ದಕ್ಕಿಂತ ಜಾಸ್ತಿ ಹಣ ಬಂದ ಘಟನೆ ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿದೆ.

ಗೋರಿಪಾಳ್ಯ ಮುಖ್ಯರಸ್ತೆಯ ಎ.ಟಿ.ಎಂ.ನಲ್ಲಿ ವಿತ್ ಡ್ರಾ ಮಾಡಲು 2000 ರೂ. ನಮೂದಿಸಿದರೆ, 3000 ರೂ. ನಗದು ಬಂದಿದೆ. 2000 ರೂ. 1 ನೋಟು ಉಳಿದವು 100 ರೂ. ನೋಟುಗಳು ಬಂದಿವೆ. ಇದು ಒಬ್ಬರಿಂದ ಒಬ್ಬರಿಗೆ ಹರಡಿ ಕ್ಷಣಾರ್ಧದಲ್ಲಿ ಹೆಚ್ಚಿನ ಸಂಖ್ಯೆಯ ಜನ ಹಣ ವಿತ್ ಡ್ರಾ ಮಾಡಲು ಈ ಎ.ಟಿ.ಎಂ. ಕೇಂದ್ರಕ್ಕೆ ಮುಗಿ ಬಿದ್ದಿದ್ದಾರೆ. ವಿಷಯ ತಿಳಿದ ಬ್ಯಾಂಕ್ ಸಿಬ್ಬಂದಿ ತಾಂತ್ರಿಕ ದೋಷ ಸರಿಪಡಿಸಿದ್ದು, ಪೊಲೀಸರು ಮುಗಿಬಿದ್ದಿದ್ದ ಜನರನ್ನು ಚದುರಿಸಿದ್ದಾರೆ.

ದೊಡ್ಡ ಮೊತ್ತದ ನೋಟ್ ಗಳನ್ನು ಬ್ಯಾನ್ ಮಾಡಿದ ಬಳಿಕ ಜನ, ಬ್ಯಾಂಕ್ ಹಾಗೂ ಎ.ಟಿ.ಎಂ. ಕೇಂದ್ರಗಳಿಗೆ ಹೆಚ್ಚಾಗಿ ಭೇಟಿ ನೀಡತೊಡಗಿದ್ದಾರೆ. ಎ.ಟಿ.ಎಂ. ಗಳಿಗೆ ಹಣ ಹಾಕಿದ ಕೆಲವೇ ಗಂಟೆಗಳಲ್ಲಿ ಹಣ ಖಾಲಿಯಾಗುತ್ತಿರುವುದರಿಂದ ಮತ್ತೆ ಮತ್ತೆ ಹಣ ತುಂಬಿಸಲಾಗುತ್ತಿದೆ. ಹೀಗೆ ಹಣ ತುಂಬಿಸುವಾಗ ಲೋಪ ಉಂಟಾಗಿದ್ದೆ ಹೆಚ್ಚಿನ ಮೊತ್ತ ಹೊರಬರಲು ಕಾರಣವಾಗಿತ್ತೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...