alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಯಾಸ್ ಕಟರ್ ಬಳಸಿ ATM ನಲ್ಲಿದ್ದ ಹಣ ದರೋಡೆ

ಬೆಂಗಳೂರು: ಗ್ಯಾಸ್ ಕಟರ್ ನಿಂದ ಎ.ಟಿ.ಎಂ. ಯಂತ್ರವನ್ನು ಕತ್ತರಿಸಿ, ಅದರಲ್ಲಿದ್ದ 1 ಲಕ್ಷ ರೂ. ಹಣವನ್ನು ದೋಚಲಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿಯ ಲಕ್ಷ್ಮಿಪುರ ರಸ್ತೆಯಲ್ಲಿರುವ ಧನಲಕ್ಷ್ಮಿ ಬ್ಯಾಂಕ್ ಗೆ ಸೇರಿದ ಎ.ಟಿ.ಎಂ.ನಲ್ಲಿ ಹಣ ದೋಚಲಾಗಿದೆ.

ಎ.ಟಿ.ಎಂ. ಒಳಗೆ ನುಗ್ಗಿದ ದುಷ್ಕರ್ಮಿಗಳು, ಸಿ.ಸಿ. ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ಗ್ಯಾಸ್ ಕಟರ್ ನಿಂದ ಯಂತ್ರವನ್ನು ಕಟ್ ಮಾಡಿ ಅದರಲ್ಲಿದ್ದ 1 ಲಕ್ಷ ರೂ. ದೋಚಿದ್ದಾರೆ.

ಡಿಸೆಂಬರ್ 16 ರಂದು ಬ್ಯಾಂಕ್ ಸಿಬ್ಬಂದಿ 10 ಲಕ್ಷ ರೂ. ಹಣವನ್ನು ಎ.ಟಿ.ಎಂ. ಯಂತ್ರಕ್ಕೆ ಹಾಕಿದ್ದರು. ಅದರಲ್ಲಿ 9 ಲಕ್ಷ ರೂ.ಗಳನ್ನು ಗ್ರಾಹಕರು ಡ್ರಾ ಮಾಡಿಕೊಂಡಿದ್ದರು.

ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...