alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯದ 8 ಪ್ರಮುಖ ನದಿಗಳಲ್ಲಿ ಅಟಲ್ ಅಸ್ತಿ ವಿಸರ್ಜನೆ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ತಿಯನ್ನು ದೇಶದ ಎಲ್ಲಾ ಪ್ರಮುಖ ನದಿಗಳಲ್ಲಿ ವಿಸರ್ಜಿಸಲು ಬಿಜೆಪಿ ನಿರ್ಧರಿಸಿದೆ. ಇದರ ಭಾಗವಾಗಿ ಕರ್ನಾಟದ ಎಂಟು ನದಿಗಳಲ್ಲೂ ಸಹ ಸೆ.23 ರಂದು ವಿಸರ್ಜಿಸಲಾಗುತ್ತದೆ.

ಇಂದು ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಬುಧವಾರ ಬೆಳಗ್ಗೆ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಎಲ್ಲಾ ರಾಜ್ಯ ಘಟಕಗಳ ಅಧ್ಯಕ್ಷರ ಸಭೆ ಕರೆದಿದ್ದಾರೆ. ಈ ಸಭೆ ಬಳಿಕ ಎಲ್ಲಾ ರಾಜ್ಯಗಳಿಗೆ ಅಸ್ತಿ ಕಳಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಅಸ್ತಿಯನ್ನು ಸ್ವೀಕರಿಸುವ ಬಿಜೆಪಿ ನಾಯಕರು ಗುರುವಾರ ಬೆಳಗ್ಗೆ ಮೆರವಣಿಗೆ ಮೂಲಕ ಶ್ರೀರಂಗಪಟ್ಟಣಕ್ಕೆ ಕೊಂಡೊಯ್ದು ವಿಸರ್ಜಿಸುವರು. ಇದೇ ವೇಳೆ ಜಿಲ್ಲಾ ಮಟ್ಟದ ಪ್ರಮುಖ ನಾಯಕರು ತಮ್ಮ ಭಾಗದ ಪ್ರಮುಖ ನದಿಗಳಲ್ಲಿ ಅಸ್ತಿ ವಿಸರ್ಜಿಸುವರು.

ಕಾವೇರಿ ಜೊತೆ ನೇತ್ರಾವತಿ, ಮಲಪ್ರಭ, ಕೃಷ್ಣಾ, ಕಾರಂಜಾ, ತುಂಗಭದ್ರಾ, ತುಂಗಾ, ಶರಾವತಿ ನದಿಗಳಲ್ಲಿ ಅಸ್ತಿ ವಿಸರ್ಜನೆ ನಡೆಯುವುದು. ಅದೇ ರೀತಿ ಸೆ. 26 ರಂದು ಬೆಂಗಳೂರಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...