alex Certify
ಕನ್ನಡ ದುನಿಯಾ       Mobile App
       

Kannada Duniya

ಪುನರ್ಜನ್ಮ ಪಡೆದರೇ ಮಾಜಿ ಪ್ರಧಾನಿ ವಾಜಪೇಯಿ…?

ರಾಯಚೂರು: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಾವನ್ನಪ್ಪಿ 13ನೇ ದಿನಕ್ಕೆ ಹುಟ್ಟಿದ ಮಗು ವಾಜಪೇಯಿಯವರ ಪುನರ್ಜನ್ಮವೆಂದು ಮಗುವಿಗೆ ಅಟಲ್ ಜೀ ಎಂದು ನಾಮಕರಣ ಮಾಡಿರುವ ವಿಚಿತ್ರ ಘಟನೆ ರಾಯಚೂರಿನಲ್ಲಿ ನಡೆದಿದೆ.

ಇಲ್ಲಿನ ಲಿಂಗಸುಗೂರಿನ ಸಜ್ಜಲ ಶ್ರೀ ಕಾಲೋನಿಯ ಪಾರ್ವತಿ ಶರಣ ಬಸವರಾಜ್ ದಂಪತಿ ತಮ್ಮ ಪುತ್ರ ವಾಜಪೇಯಿಯವರ ಪುನರ್ಜನ್ಮ ಎಂದು ಭಾವಿಸಿ, ಅಟಲ್ ಜೀ ಎಂದು ಹೆಸರಿಟ್ಟಿದ್ದಾರೆ. ವಾಜಪೇಯಿ ಮೃತರಾಗಿ 13ನೇ ದಿನಕ್ಕೆ ಮಗು ಹುಟ್ಟಿದೆಯಂತೆ. ಹೀಗಾಗಿ ಮಗು ವಾಜಪೇಯಿ ಅವರ ಪುನರ್ಜನ್ಮ ಎಂಬುದು ಮಗುವಿನ ತಂದೆ-ತಾಯಿಯ ಧೃಡ ನಂಬಿಕೆ.

ಇನ್ನು ಮಗುವಿಗೆ ಕಾಶಿ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯ ಭಗವತ್ಪಾದರು ನಾಮಕರಣ ಮಾಡಿದ್ದಾರೆ. ತಮ್ಮ ಮಗು ಅಜಾತ ಶತ್ರುವಿನಂತೆ ಕೀರ್ತಿಶಾಲಿಯಾಗಿ ಬೆಳೆಯಲಿ ಎಂಬುದೇ ಪೋಷಕರ ಆಶಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...