alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬದ ಸಂದರ್ಭದಲ್ಲಿ ‘ನಮ್ಮ ಮೆಟ್ರೋ’ ದಿಂದ ನೂತನ ದಾಖಲೆ

ದಸರಾ ಹಬ್ಬದ ಸಾಲು ಸಾಲು ರಜೆಯ ಲಾಂಗ್ ವೀಕೆಂಡ್ ಹಿನ್ನಲೆಯಲ್ಲಿ, ದಿನ ಒಂದರಲ್ಲೇ ಅತಿಹೆಚ್ಚು ಪ್ರಯಾಣಿಕರು‌ ಮೆಟ್ರೋ ಬಳಸುವ ಮೂಲಕ, ನಮ್ಮ ಮೆಟ್ರೋ ಇದೀಗ ನೂತನ ದಾಖಲೆಯನ್ನು ನಿರ್ಮಿಸಿದೆ.

ಗುರುವಾರ, ಶುಕ್ರವಾರ ದಸರಾ ಪ್ರಯಕ್ತ ರಜೆಯೊಂದಿಗೆ ಶನಿವಾರ ರಜೆ ಹಾಕಿಕೊಂಡರೆ ಸತತ ನಾಲ್ಕು ದಿನ ರಜೆ ದೊರೆಯುವುದರಿಂದ ರಾಜಧಾನಿಯ ಬಹುತೇಕರು ಬೆಂಗಳೂರಿನಿಂದ ಇತರೆ ನಗರಗಳಿಗೆ ತೆರಳಿದ್ದಾರೆ. ಆದ್ದರಿಂದ ಬುಧವಾರ ಒಂದೇ ದಿನ 4.49 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ ಬೆಳೆಸುವ ಮೂಲಕ ದಿನವೊಂದರಲ್ಲಿ ಅತಿಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ ದಾಖಲೆಯನ್ನು ನಿರ್ಮಿಸಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಸಂಪರ್ಕಿಸುವ ನೇರಳ ಬಣ್ಣದ ಲೇನ್ ನಲ್ಲಿ ಬುಧವಾರ ಒಂದೇ ದಿನ 2.43 ಲಕ್ಷ ಜನ ಪ್ರಯಾಣಿಸಿದ್ದರೆ, ಯಲಚೇನಹಳ್ಳಿ- ನಾಗಸಂದ್ರ ಸಂಪರ್ಕಿಸುವ ಹಸಿರು ಬಣ್ಣದ ಲೇನ್ ನಲ್ಲಿ 2.06 ಲಕ್ಷ ಪ್ರಯಾಣಿಸಿದ್ದಾರೆ. ಇದಕ್ಕೂ ಮೊದಲು ಸೆ.11ರಂದು 4.36 ಲಕ್ಷ ಪ್ರಯಾಣಿಸಿದ್ದೇ ಇಲ್ಲಿಯವರೆಗಿನ ದಾಖಲೆಯಾಗಿತ್ತು.

ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿದೇರ್ಶಕ ಅಜಯ್ ಸೇಠ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರತಿನಿತ್ಯ ಮೆಟ್ರೋದಲ್ಲಿ ಒಂದು ಕೋಟಿ ಆದಾಯ ಬರುತ್ತಿದ್ದು, ಸುಮಾರು ನಾಲ್ಕು ಲಕ್ಷ ಜನ ಪ್ರತಿನಿತ್ಯ ಪ್ರಯಾಣಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ಪ್ರಯಾಣಿಕರು ಮೆಟ್ರೋ ಬಳಸುವ ಸಾಧ್ಯತೆಯಿದ್ದು, 2019ರ ವೇಳೆಗೆ ಐದು ಲಕ್ಷ ಜನ ಪ್ರತಿನಿತ್ಯ ಮೆಟ್ರೋ ಬಳಸುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...