alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಧಾನಿಯ ಯುವತಿಗೆ ಒಲಿದು ಬಂತು ಅಂತಾರಾಷ್ಟ್ರೀಯ ಪುರಸ್ಕಾರ

ಬೆಂಗಳೂರು ಮೂಲದ ಗರ್ವಿತ ಗುಲಾಟಿ ಜಾಗತಿಕ ಯುವ ಪರಿವರ್ತನಾ ಸಾಧಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವದ 42 ರಾಷ್ಟ್ರಗಳು ಆಯ್ಕೆ ಮಾಡುವ ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಭಾರತದ ಯುವ ಸಾಧಕಿಯಾಗಿ ಆಯ್ಕೆಯಾಗಿದ್ದು ಗರ್ವಿತಾ ಗುಲಾಟಿ ಮಾತ್ರ. 15ವರ್ಷ ವಯಸ್ಸಿನವರಾಗಿದ್ದಾಗ್ಲೇ ವೈ ವೇಸ್ಟ್ ಎಂಬ ಸಾಮಾಜಿಕ ಸಂಸ್ಥೆಯನ್ನು ಸ್ಥಾಪಿಸಿ ಜಲಸಂರಕ್ಷಣೆಯ ಬಗ್ಗೆ ಸಾಮಾಜಿಕ ಕಳಕಳಿ ಮೂಡಿಸಿ ಪರಿವರ್ತನೆ ತಂದ ಕಾರಣಕ್ಕಾಗಿ ವಿಶ್ವದ 1000 ಯುವ ಚೇಂಜ್ ಮೇಕರ್ ಗಳಲ್ಲಿ ಒಬ್ಬರಾಗಿ ಗರ್ವಿತಾ ಗುಲಾಟಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯನ್ನು ಪಡೆಯೋಕೆ ಗರ್ವಿತಾ ಸ್ವಿಡ್ಜರ್ರ್ಲೆಂಡ್ ನ ರಾಜಧಾನಿ ಜ್ಯೂರಿಚ್ ಗೆ ತೆರಳಬೇಕಿದೆ. ಆಗಸ್ಟ್ 18 ರವರೆಗೆ ನಡೆಯಲಿರುವ ವಿಶ್ವ ಯುವ ಸಮ್ಮೇಳನದಲ್ಲಿ ಗರ್ವಿತಾ ಭಾಗವಹಿಸಲಿದ್ದಾರೆ. ವಿಶ್ವದ 42 ರಾಷ್ಟ್ರಗಳು ವಿಶ್ವ ಯುವ ಚೇಂಜ್ ಮೇಕರ್ ಗಳ ಒಕ್ಕೂಟದ ಸದಸ್ಯತ್ವ ಪಡೆದಿದೆ. ಜಗತ್ತಿನ 185 ರಾಷ್ಟ್ರಗಳಿಂದ ಜಾಗತಿಕ ಯುವ ಚೇಂಜ್ ಮೇಕರ್ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ನಾಲ್ಕು ಲಕ್ಷ ಜನರು ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದರು.

ಜಾಗತಿಕ ರಂಗದಲ್ಲಿ ಪರಿವರ್ತನೆ ಮೂಡಿಸಿದವರ ಪೈಕಿ ಸ್ಥಾನ ಸಿಕ್ಕಿರುವುದು ನನಗೆ ಸಂತಸ ಮೂಡಿಸಿದೆ. ಈ ರಂಗದಲ್ಲಿ ಇನ್ನಷ್ಟು ಕಲಿಯಲು, ಇತರೆ ಯವ ಸಾಧಕರ ಸಾಧನೆಗಳನ್ನ ತಿಳಿದುಕೊಳ್ಳಲು ನನಗೆ ಇದು ಉತ್ತಮ ಅವಕಾಶ ಸಿಕ್ಕಿದೆ. ನಮ್ಮ ಸಮಾಜದ ಪ್ರತಿಯೊಬ್ಬ ಯುವಕರು ಮತ್ತೊಬ್ಬರ ಧನಾತ್ಮಕ ಸಾಧನೆಗೆ ಸ್ಫೂರ್ತಿಯಾಗುವಂತೆ ಮಾಡೋದೇ ನನ್ನ ಗುರಿ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...